ಬೆಂಗಳೂರು,ಅ,28,2019(www.justkannada.in): ಡಾ.ರಾಜ್ ಕುಮಾರ್ ಪ್ರತಿಷ್ಠಾನ ಒಂದು ಪ್ರವಾಸೋದ್ಯಮ ಸ್ಥಳ ಆಗಿದೆ. ಈ ಹಿಂದೆ ಈ ಯೋಜನೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಪ್ಪಿದ್ರು. ಈಗ ಅನುದಾನವನ್ನು ಹಾಲಿ ಸಿಎಂ ಯಡಿಯೂರಪ್ಪ ಬಳಿ ಕೇಳಿದ್ದೇವೆ. ಅದಕ್ಕೆ ಸಿಎಂ ಬಿಎಸ್ ವೈ ಒಪ್ಪಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಜ್, ಮಾಜಿ ಅಧ್ಯಕ್ಷರಾದ ಎ. ಚಿನ್ನೇಗೌಡ, ಸಾ.ರಾ. ಗೋವಿಂದ್, ಸೇರಿ ಹಲವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದರು. ಈ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ಡಾ.ರಾಜ್ ಕುಮಾರ್ ಪ್ರತಿಷ್ಠಾನ ಒಂದು ಪ್ರವಾಸೋದ್ಯಮ ಸ್ಥಳ ಆಗಿದೆ. ಈ ಪ್ರತಿಷ್ಠಾನವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ಹಿಂದೆ ಈ ಯೋಜನೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಪ್ಪಿದ್ರು. ಸಿದ್ದರಾಮಯ್ಯ ಇದ್ದಾಗ 22 ಕೋಟಿ ಕೊಡಲು ಒಪ್ಪಿದ್ರು, 10 ಕೋಟಿ ರೂ ಬಜೆಟ್ ನಲ್ಲಿ ನಿಗದಿ ಮಾಡಿದ್ರು. ಈ ಅನುದಾನವನ್ನು ಹಾಲಿ ಸಿಎಂ ಯಡಿಯೂರಪ್ಪ ಗೆ ಕೇಳಿದ್ದೇವೆ. ಸಿಎಂ ಅನುದಾನ ಕೊಡಲು ಒಪ್ಪಿದ್ದಾರೆ ಎಂದರು.
ಡಾ.ಅಂಬರೀಶ್ ಅವರ ಪ್ರತಿಷ್ಠಾನಕ್ಕೂ ಒಂದು ಟ್ರಸ್ಟ್ ರಚನೆ ಆಗಬೇಕಿದೆ. ಮುಂದಿನ ತಿಂಗಳ 24 ರೊಳಗೆ ಟ್ರಸ್ಟ್ ರಚಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ ಸಿಎಂ ಟ್ರಸ್ಟ್ ರಚನೆಯ ಭರವಸೆ ಕೊಟ್ಟಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ತಿಳಿಸಿದರು.
Key words: Dr. Rajkumar Foundation- CM BS Yeddyurappa- meet -Producer -Rock Line Venkatesh