ಕ್ಷೇತ್ರ ಮರುವಿಂಗಡಣೆ ಮೂಲಕ ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಸಂಚು: ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಆಕ್ರೋಶ

ಬೆಂಗಳೂರು, ಮಾರ್ಚ್‌, 6,2025 (www.justkannada.in): ದಕ್ಷಿಣ ಭಾರತದ ಯಶಸ್ಸು ಕಂಡು ಸೊರಗಿರುವ ಕೇಂದ್ರ ಬಿಜೆಪಿ ಈಗ “ಕ್ಷೇತ್ರ ಮರು ವಿಂಗಡಣೆ” ಎಂಬ ಅಸ್ತ್ರದ ಮೂಲಕ ಸಮರ ಸಾರಲು ಹೊರಟಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಕಿಂಚಿತ್ತೂ ಅನ್ಯಾಯವಾಗಲು ನಮ್ಮ ಕಾಂಗ್ರೆಸ್‌ ಸರ್ಕಾರ ಬಿಡಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌, ಕೇಂದ್ರ ಸರ್ಕಾರ ಉದ್ದೇಶಿತ ಯೋಜನೆಯು ದಕ್ಷಿಣ ಭಾರತದ ರಾಜ್ಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಇಲ್ಲವೇ ಅನ್ಯಾಯ ಮಾಡುವುದು ಆಗಿದೆ ಎಂದು ಕಿಡಿಕಾರಿದರು.

ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರು ವಿಂಗಡಣೆ ಮಾಡಲಾಗುತ್ತದೆ ಎಂಬ ವರದಿಗಳು ಬಂದಿವೆ. ಇದರಿಂದ ಅನ್ಯಾಯವಾಗುವುದು ನಮ್ಮ ದಕ್ಷಿಣ ಭಾರತದ ರಾಜ್ಯಗಳಿಗೆ. ಏಕೆಂದರೆ ಹಲವಾರು ದಶಕಗಳಿಂದಲೂ ನಮ್ಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದರು.

ತೆರಿಗೆ ಹಂಚಿಕೆಯಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಈಗ ಕ್ಷೇತ್ರ ಮರು ವಿಂಗಡಣೆ ನೆಪದಲ್ಲಿ ಮತ್ತೆ ದಕ್ಷಿಣದ ಮೇಲೆ ಉತ್ತರ ಭಾರತದ ಪಕ್ಷವಾಗಿರುವ ಬಿಜೆಪಿ ಸಮರ ಸಾರಲು ಸಜ್ಜಾಗಿದೆ ಎಂದು ಸಚಿವರು ಟೀಕಿಸಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಪರವಾಗಿ ಹೆಚ್ಚು ಬೆಂಬಲ ಸಿಕ್ಕಿಲ್ಲ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳನ್ನು ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರ ನಡೆದಿದೆ ಎಂದು ಆಕ್ಷೇಪಿಸಿದರು.

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸಚಿವ ಅಮಿತ್‌ ಶಾ ಅವರ ಆಲೋಚನೆಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಕೇರಳ ಮುಖ್ಯಮಂತ್ರಿ ಪಿ.ವಿಜಯನ್ ಕೂಡ ಜನಸಂಖ್ಯೆ ಆಧಾರಿತ ಕ್ಷೇತ್ರ ಮರು ವಿಂಗಡಣೆ ಪ್ರಸ್ತಾವಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ ಎಂದು ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

ಒಂದು ವೇಳೆ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರು ವಿಂಗಡಣೆಯಾದರೆ ನಮ್ಮ ರಾಜ್ಯದ ಲೋಕಸಭಾ ಕ್ಷೇತ್ರಗಳು 28ರಿಂದ 26ಕ್ಕೆ ಇಳಿಯುವ ಸಾಧ್ಯತೆಗಳಿವೆ. ಇದನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಈ ಅನ್ಯಾಯವನ್ನು ನಾವು ಕನ್ನಡಿಗರು ಸಹಿಸಲ್ಲ. ನಮ್ಮ ಮುಖ್ಯಮಂತ್ರಿಗಳು ಹೇಳಿದಂತೆ ದಕ್ಷಿಣ ಭಾರತದ ರಾಜ್ಯಗಳು ಈ ವಿಷಯದಲ್ಲಿ ಒಗ್ಗಟು ಪ್ರದರ್ಶಿಸಿ ಕೇಂದ್ರ ಬಿಜೆಪಿಯ ನಡೆಗೆ ತಡೆಯೊಡ್ಡುತ್ತೇವೆ. ಕ್ಷೇತ್ರಗಳ ಸಂಖ್ಯೆಗೆ ಅನುಪಾತದಲ್ಲಿಮರು ವಿಂಗಡಣೆ ಮಾಡಲಿ. ಈ ವಿಷಯದಲ್ಲಿ ರಾಜ್ಯದ ಬಿಜೆಪಿ, ಜೆಡಿಎಸ್‌ ಸಂಸದರು ಧೈರ್ಯದಿಂದ ದನಿ ಎತ್ತಬೇಕು ಎಂದು ಪಾಟೀಲ್‌ ಆಗ್ರಹಿಸಿದರು.

ENGLISH SUMMARY..

Delimitation Is a Conspiracy by the BJP to Control South India: Dr. Sharan Prakash Patil

Bengaluru, March 6: Rattled by the success of southern states in all fronts the BJP-led central government is now preparing to wage war against the south using the weapon of delimitation. However, the Congress government in Karnataka will not allow any injustice to happen to the southern states declared Dr. Sharan Prakash Patil, minister for medical education, skill development, livelihood, entrepreneurship and Raichur district in-charge.

Speaking to reporters at Vidhana Soudha, Dr. Sharan Prakash Patil lashed out at the centre stating that the proposed delimitation plan is an attempt to keep the southern states under control and impose unfair policies upon them.

Reports suggest that the delimitation exercise will be based on population. This is unfair to the southern states as Karnataka and other south Indian states have implemented effective population control measures for decades, unlike the northern states, which have failed to do so, he asserted.

The central BJP government has already deceived the southern states in tax distribution. Now, under the guise of delimitation it is once again readying itself to wage war on the south, Dr Patil criticized.

The BJP has failed to gain significant support in south India and cannot tolerate the region’s progress. Therefore it is attempting to reduce the number of representatives from the south in Parliament, he opined.

Karnataka chief minister Siddaramaiah has already given a fitting reply to Union minister Amit Shah’s proposal. Similarly, Tamil Nadu chief minister M.K. Stalin and Kerala chief minister P Vijayan have also expressed their dissatisfaction with the population-based delimitation proposal and have strongly countered the BJP at the centre, Dr. Patil stated.

If delimitation is carried out based on population, Karnataka’s Lok Sabha seats could be reduced from 28 to 26. The people of Karnataka will not tolerate this injustice, he warned.

“We Kannadigas will not accept this injustice. As our chief minister has emphasized, the southern states must stand united and resist the BJP’s moves. Delimitation should be carried out proportionally and fairly. BJP and JD(S) MPs from Karnataka must show courage and raise their voices,” Patil demanded.

Key words: Delimitation, BJP, Control South India, Minister, Dr. Sharan Prakash Patil