ಮೈಸೂರು,ಆ,26,2020(www.justkannada.in): ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 105ನೇ ಜಯಂತಿ ಹಿನ್ನಲೆ ಆಗಸ್ಟ್ 29 ರಂದು ಡಿಜಿಟಲ್ ಮಾಧ್ಯಮದ ಮೂಲಕ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜೆಎಸ್ಎಸ್ ವಿದ್ಯಾಸಂಸ್ಥೆ ಮುಖ್ಯ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಎಸ್ಎಸ್ ವಿದ್ಯಾಸಂಸ್ಥೆ ಮುಖ್ಯ ಕಾರ್ಯದರ್ಶಿ ಮಂಜುನಾಥ್, ಕರೋನಾ ಹಿನ್ನಲೆ ಕಾರ್ಯಕ್ರಮವನ್ನ ಸರಳವಾಗಿ ಡಿಜಿಟಲ್ ಮಾಧ್ಯಮ ಮೂಲಕ ನೇರವೇರಿಸಲಾಗುತ್ತದೆ. ಕಾರ್ಯಕ್ರಮವನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮಾಜಿ ಪ್ರಧಾನಿ ದೇವೆಗೌಡ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅನಿಮೇಷನ್ ಚಿತ್ರ ಸಿದ್ದಗೊಳಿಸಲಾಗಿದೆ. ಅನಿಮೇಷನ್ ಚಿತ್ರವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ದರ್ಶನ ತೂಗುದೀಪ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುತ್ತೂರು ಮಠ ಹಾಗೂ ಮೈಸೂರಿನ ಶಾಖ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಭಕ್ತರು ಮತ್ತು ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಅನ್ ಲೈನ್ ಮೂಲಕವೇ ಎಲ್ಲರು ವೀಕ್ಷಣೆ ಮಾಡುವಂತೆ ಮಂಜುನಾಥ್ ಮನವಿ ಮಾಡಿದರು.
Key words: Dr. Shri Shivaratri Rajendra Mahaswamy’s- 105th Jayanthi- Celebration-mysore