ಮೈಸೂರು,ಜೂ,28,2019(www.justkannada.in): ಪರಿಸರವನ್ನ ರಕ್ಷಣೆ ಮಾಡೋದು ನಮ್ಮ ಕೆಲಸ. ಗಡಿಯಲ್ಲಿ ದೇಶವನ್ನ ಕಾಯುವಷ್ಟೇ ಪರಿಸರವನ್ನ ಕಾಪಾಡುವ ಅಗತ್ಯತೆ ಇದೆ ಎಂದು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಸುಧಾಕರ್ ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಬಳಿಕ ಮೈಸೂರಿಗೆ ಮೊದಲ ಬಾರಿಗೆ ಶಾಸಕ ಡಾ.ಸುಧಾಕರ್ ಭೇಟಿ ನೀಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಸುಧಾಕರ್ , ಮೈಸೂರು ಸ್ವಚ್ಛತೆಯಲ್ಲಿ ವಿಶೇಷತೆ ಪಡೆದುಕೊಂಡಿದೆ. ಹೀಗಾಗಿಯೇ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ನಾನು ವೈದ್ಯನು ಆಗಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವುದರಿಂದ ಸಮಗ್ರವಾಗಿ ಕರ್ತವ್ಯ ನಿರ್ವಹಿಸಲು ಸಾದ್ಯವಾಗತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾಂತ್ರಿಕ ಬದುಕಿನಲ್ಲಿ ಪರಿಸರ ಹಾಳುಮಾಡುವ ಕೆಲಸ ವಾಗ್ತಿದೆ.. ಕೇವಲ ಜನಪ್ರತಿನಿಧಿಗಳಿಂದ ಅಥವಾ ಅಧಿಕಾರಿಗಳಿಂದ ಪರಿಸರ ಸಂರಕ್ಷಣೆ ಅಸಾಧ್ಯ, ಇದರಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗಿಯಾಗಬೇಕು. ಸ್ವಚ್ಛ ನಗರಿ ಎಂದು ಬಿರುದು ಪಡೆದುಕೊಂಡಿರುವ ಮೈಸೂರಿನಿಂದಲೇ ನಾನು ಪ್ರವಾಸ ಆರಂಭಿಸಿದ್ದೇನೆ ಎಂದು ಡಾ.ಸುಧಾಕರ್ ತಿಳಿಸಿದರು.
ನಾನು ಮೈಸೂರು ವಲಯದ ಮೈಸೂರು ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಪ್ರಾರಂಭಿಸಿದ್ದೇನೆ. ಈ ಭಾಗದಲ್ಲಿ ನದಿಗಳ ಸಂಖ್ಯೆ ಹೆಚ್ಚಿದೆ. ನದಿಗಳನ್ನು ಸಂರಕ್ಷಣೆ ಮಾಡುವಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರದ ಬಗ್ಗೆ ಗಮನ ಹರಿಸಿದ್ದೇನೆ. ಈ ಭಾಗದಲ್ಲಿ ಇರುವ ಕೈಗಾರಿಕೆಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಾಲಿನ್ಯ ನಿಯಂತ್ರಣ ಸಾಧಿಸಲು ಅವರು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಡಗು ಜಿಲ್ಲೆಯ ಆದ ದುರಂತ ಪರಿಸರ ಸಂರಕ್ಷಣೆ ಕುರಿತು ಹೆಚ್ಚನ ಗಮನ ಹರಿಸಲಾಗಿದೆ. ಹಸಿರು ಕರ್ನಾಟಕ ಸುಂದರ ಕರ್ನಾಟಕ ಕಾರ್ಯಕ್ರಮ ಜಾರಿಗೆ ತರಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಆ ಕಾರ್ಯಕ್ರಮವನ್ನ ಅಕ್ಟೋಬರ್ ೨ ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ಈಗಾ ಪ್ಲಾಸ್ಟಿಕ್ ನಿಷೇಧವಾಗಿದೆ. ಆದ್ರೇ ನಿಷೇದಿತ ಪ್ಲಾಸ್ಟಿಕ್ ಅನ್ನು ಇನ್ನೂ ತಯಾರಿಕೆ ಮಾಡಲಾಗುತ್ತಿದೆ. ಅದನ್ನ ಮೂಲದಿಂದಲೇ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಅದನ್ನ ಮೊದಲು ಕಾರ್ಪೊರೇಷನ್ ಮಟ್ಟದಲ್ಲಿಯೇ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೈಸೂರಿನ ಶ್ಯಾಂಡನಹಳ್ಳಿ ಹಾಗೂ ತಳೂರಿನಲ್ಲಿ ಸಂಭವಿಸಿದ ಸಾವಿನ ಬೂದಿ ಪ್ರಕರಣದ ಕುರಿತು ಸಂಪೂರ್ಣ ತನಿಗೆ ಸೂಚಿಸಲಾಗಿದೆ. ಅದರ ವರದಿ ಬಂದ ನಂತರ ತಪ್ಪಿತಸ್ಥ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಲಸ ನಮ್ದು ವೋಟ್ ಮಾತ್ರ ಮೋದಿಗೆ-ಸಿಎಂ, ಡಿಸಿಎಂ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಶಾಸಕ ಡಾ. ಸುಧಾಕರ್ , ಈ ಹೇಳಿಕೆ ಸಹಜ , ಕಳೆದ 5 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರ ಒಳ್ಳೆ ಆಡಳಿತ ನೀಡುವ ಮೂಲಕ ಒಳ್ಳೆ ಅಭಿವೃದ್ಧಿ ಕೆಲಸಗಳನ್ನ ಮಾಡಿದೆ. ಆದರೆ ಕಳೆದ ಚುನಾವಣೆಯಲ್ಲಿ ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ನಡೆದಿರುವುದರಿಂದ ನಿಜವಾಗಿ ಕೆಲಸ ಮಾಡಿರೋರಿಗೆ ಈ ರೀತಿ ಬೇಸರವಾಗೋದು ಸಹಜ ಎನ್ನುವ ಮೂಲಕ ತಮ್ಮ ಮೂವರು ನಾಯಕರ ಹೇಳಿಕೆಯನ್ನ ಸಮರ್ಥಿಸಿಕೊಂಡರು.
Key words: Dr Sudhakar- visit- Mysore -after – Chairman -State Pollution Control Board