ಮೈಸೂರು,ಮೇ,22,2023(www.justkannada.in): ಮೈಸೂರಿನ ‘ಸಮತಾ ಅಧ್ಯಯನ ಕೇಂದ್ರ’ವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ‘ಕವನ/ ಕಥಾ ಸ್ಪರ್ಧೆ -2023’ ಯಲ್ಲಿ ಬೆಂಗಳೂರು ವಿಜಯಾ ಟೀಚರ್ಸ್ ಕಾಲೇಜಿನ ಎಂ.ಸಿ.ಜಗದೀಶ (ಕವನ), ಉಜಿರೆ ಎಸ್ ಡಿಎಂ ಕಾಲೇಜಿನ ಜಿ.ಎಂ.ಸಂಜಯ್ (ಕಥೆ) ಪ್ರಥಮ ಬಹುಮಾನ ಪಡೆದಿದ್ದಾರೆ.
ಕವನ ವಿಭಾಗದಲ್ಲಿ ಕಾಸರಗೋಡಿನ ಕೇರಳ ಕೇಂದ್ರೀಯ ವಿವಿಯ ಕೆ.ಸ್ವಾತಿ , ಸಾಗರ ತಾಲೂಕು ಹೊಸಕೊಪ್ಪದ ಎಚ್.ಜಿ.ಅಭಿನಂದನ್ , ಕಥಾ ವಿಭಾಗದಲ್ಲಿ ಸಕಲೇಶಪುರ ಜೆಎಸ್ಎಸ್ ಮಹಾವಿದ್ಯಾಲಯದ ಶಿವಶಂಕರ ಕಡದಿನ್ನಿ , ಕೇರಳ ಕೇಂದ್ರೀಯ ವಿವಿಯ ಆರ್. ನವ್ಯಾ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಪಡೆದಿದ್ದಾರೆ.
ಪ್ರೋತ್ಸಾಹಕರ ಬಹುಮಾನ ಪಡೆದವರು:
ಕವನ ವಿಭಾಗ: ಪಿ.ರಂಜಿತಾ (ಕೇರಳ ಕೇಂದ್ರೀಯ ವಿವಿ), ಜಿ.ಎಂ.ಸಂಜಯ್ (ಉಜಿರೆ ಎಸ್ ಡಿಎಂ ಕಾಲೇಜು), ಚೇತನ್ (ಮೈಸೂರು ಕುವೆಂಪುನಗರ ಪ್ರ.ದ.ಕಾಲೇಜು), ತರುಣ್ ವಿಶ್ವಜಿತ್ (ಚಿಕ್ಕಬಳ್ಳಾಪುರ ಪ್ರ.ದ.ಕಾಲೇಜು), ಎನ್.ಲಾವಣ್ಯ (ಎಚ್.ಡಿ.ಕೋಟೆ ತಾ.ರಾಗಲಕುಪ್ಪೆ), ಲಕ್ಷ್ಮಿ ಶ್ರೀಶೈಲ ಕಾತ್ರಾಳ (ಹೊನವಾಡ,ವಿಜಯಪುರ ಜಿಲ್ಲೆ), ಆನಂದ ಕುಮಾರ್ (ಮೈಸೂರು ಸಿದ್ಧಾರ್ಥನಗರ ಪ್ರ.ದ.ಕಾಲೇಜು), ಬಿ.ಎಸ್.ಕಿಶನ್ ಗೌಡ (ಮೂಡುಬಿದಿರೆ ಆಳ್ವಾಸ್ ಕಾಲೇಜು), ಶಿಲ್ಪಾ ಶ್ರೀನಿವಾಸ ರಾಜು ( ಸಂತ ಪ್ರಾನ್ಸಿಸ್ ಕಾಲೇಜು, ಕೋರಮಂಗಲ), ಸುಮಾ ಎಂ.(ಸುರಾನಾ ಕಾಲೇಜು, ಪೀಣ್ಯಾ ಕ್ಯಾಂಪಸ್).
ಕಥಾ ವಿಭಾಗ: ಸಾಧನ ಕೆ.ಜೋಷಿ ( ಬಿಜಿಎಸ್ ಕಾಲೇಜು, ಗುರುಪುರ, ಶಿವಮೊಗ್ಗ), ಸಿದ್ಧಾರೂಢ ಗುಗ್ಗರಿ (ಎಸ್ ಆರ್ ಎಫ್ ಜಿಸಿ ಕಾಲೇಜು, ಬೆಳಗಾವಿ), ದೇವಿಕಾ ಪಿ.( ಕೇರಳ ಕೇಂದ್ರೀಯ ವಿವಿ, ಕಾಸರಗೋಡು), ಅಂಕಿತಾ ವಿ.ಎ.(ಬಿಜಿಎಸ್ ಪಿಯು ಕಾಲೇಜು, ಗೌರಿಬಿದನೂರು), ವಿನಾಯಕ ಸ.ಹಿರೇಮಠ (ಬಿವಿವಿ ಸಂಘ ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟೆ), ಪವಿತ್ರ ಎಸ್.ಪಂಚನ್ನವರ್ (ಐ ಎಸ್ ಯಾದವಾಡ ಪ್ರ.ದ.ಕಾಲೇಜು, ರಾಮದುರ್ಗ,ಬೆಳಗಾವಿ).
ಡಾ.ಮೀನಾ ಮೈಸೂರು, ಡಾ.ಸಂತೋಷ್ ಚೊಕ್ಕಾಡಿ, ಡಾ.ಎಂ.ಎಸ್.ವೇದಾ (ಕವನ), ಡಾ.ಸುಮಾ ಎಂಬಾರ್, ಡಾ.ಚಿಕ್ಕಮಗಳೂರು ಗಣೇಶ್, ಡಾ.ಎಚ್.ಎಂ. ಕಲಾಶ್ರೀ (ಕಥಾ ವಿಭಾಗ) ಇವರು ತೀರ್ಪುಗಾರರಾಗಿದ್ದರು. ಜೂನ್ 1 , 2023ರಂದು ಬಹುಮಾನ ವಿತರಣಾ ಸಮಾರಂಭವು ಮೈಸೂರಿನಲ್ಲಿ ನಡೆಯಲಿದೆ.
Key words: Dr. Vijaya Dabba- Poetry-Story –Competition-mysore