ಮೈಸೂರು,ಫೆಬ್ರವರಿ,21,2024(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕುಡಿಯುವ ನೀರಿಗೆ ಭಾರಿ ಸಮಸ್ಯೆ ಉಂಟಾಗಿದ್ದು ಜನರಿಗೆ ಸಂಕಷ್ಟ ಎದುರಾಗಿದೆ.
ಮೈಸೂರಿನ ಶ್ರೀರಾಂಪುರ 2ನೇ ಹಂತದ ಪ್ರೀತಿ ಹಿಲ್ ವ್ಯೂ ಬಡಾವಣೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಬಡಾವಣೆಯ ನಿವಾಸಿಗಳು ಸತತ ಏಳೆಂಟು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು 60-70 ಮನೆಗಳ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುತ್ತಿದ್ದು, ನೆಂಟರು ಬಂದರೆ ವಾಪಾಸ್ ಹೋಗಿ ಎನ್ನುವ ಪರಿಸ್ಥಿತಿ ಉಂಟಾಗಿದ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಇದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಿಲ್ಲ. ವಾರಕ್ಕೊಮ್ಮೆ ಮಾತ್ರ ನೀರು ಬಿಡುತ್ತಾರೆ. ಕೇವಲ ಅರ್ಧ ಗಂಟೆ ಮಾತ್ರ ನೀರು ಬಿಡುತ್ತಾರೆ. ಕಾರಣ ಕೇಳಿದ್ರೆ ಅಧಿಕಾರಿಗಳು ನೆಪ ಹೇಳುತ್ತಾರೆ. ಸರ್ಕಾರಕ್ಕೆ ನೀಡುವ ಎಲ್ಲಾ ರೀತಿಯ ಟ್ಯಾಕ್ಸ್ ನೀಡುತ್ತಿದ್ದೇವೆ, ಆದರೂ ನೀರು ಸಿಗುತ್ತಿಲ್ಲ ಎಂದು ಬಡವಾಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
Key words: Drinking –water- problem – Mysore- permanent- solution -demand