ಬೆಳಗಾವಿ,ಡಿಸೆಂಬರ್,2,2022(www.justkannada.in): ಗಡಿಭಾಗದಲ್ಲಿ ಅಭಿವೃದ್ಧಿಗೆ ಸರ್ಕಾರ ಬದ್ಧ. ಗಡಿಭಾಗದಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು, ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಮದುರ್ಗದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಗಡಿ ಭಾಗದ ಕನ್ನಡ ಶಾಲೆಗಳಿಗೆ ಅಭಿವೃದ್ದಿಗಾಗಿ 100 ಕೋಟಿ ರೂ. ಬಿಡುಗಡೆ ಮಾಡುತ್ತೇವೆ. ಕನ್ನಡಿಗರ ರಕ್ಷಣೇ ಅಭಿವೃದ್ಧಿಗೆ ನಮ್ ಸರ್ಕಾರ ಬದ್ದ. ಹೊರರಾಜ್ಯದ ಕನ್ನಡಿಗರು ವಿದೇಶದಲ್ಲಿರುವ ಕನ್ನಡಿಗರು ಯಾರೇ ಆಗಲಿ ರಕ್ಷಣೆಗ ಬದ್ದ ಎಂದರು.
ಗಡಿಬಾಗದ ರಸ್ತೆ ಅಭಿವೃದ್ಧಿಗೆ ವಿಶೇಷ ಅಭಿಯಾನ. 1800 ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಕ್ರಮ ಕಾಸರಗೂಡುವಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ನೀಡಲಾಗುತ್ತದೆ. ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಿಸುವ ಬೇಡಿಕೆ ಇದೆ. 19 ಕೆರೆ ತುಂಬುವ ಯೋಜನೆ ಮಾಡುತ್ತೇವೆ. ನೀರಾವರಿ ಯೋಜನೆಗೆ ಬದ್ಧ. ಬಿಎಸ್ ಯಡಿಯೂರಪ್ಪ ಕಾಲದಲ್ಲಿ ಉತ್ತಮ ಕೆಲಸ ಆಗಿದೆ. ಕೋವಿಡ್ ವೇಳೆಯೂ ಸಮರ್ಥವಾಗಿ ಕೆಲಸ ಮಾಡಿದ್ದೇವೆ. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ ಎಂದು ಸಿಎಂ ನುಡಿದರು.
Key words: Drinking water – villages – border-special grant – Kannada schools– CM Bommai.