ಬೆಂಗಳೂರು,ಜನವರಿ ,16,2023(www.justkannada.in): ಬೆಂಗಳೂರು-ಮೈಸೂರು ನಡುವಿನ ಕೆಎಸ್ ಆರ್ ಟಿಸಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಲಾಯಿತು.
ಮೆಜೆಸ್ಟಿಕ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದ ಡಿಸಿ ಚಂದ್ರ ಶೇಖರ್. ಕೆಎಸ್ ಆರ್ ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಚಾಲನೆ ನೀಡಿದರು. ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್ ಬಸ್ ಇದಾಗಿದೆ.
ಬೆಂಗಳೂರು-ಮೈಸೂರು ನಡುವಿನ ನಾನ್ ಸ್ಟಾಪ್ ಎಲೆಕ್ಟ್ರಿಕ್ ಬಸ್ ಸೇವೆಯಾಗಿದ್ದು, ಬಸ್ ನಲ್ಲಿ ವಿದ್ಯಾರ್ಥಿ ಪಾಸ್ ಗೆ ಅವಕಾಶವಿರುವುದಿಲ್ಲ. ಇನ್ನು ಮೂರು ತಿಂಗಳಲ್ಲಿ 50 ಕೆಎಸ್ ಆರ್ ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿದೆ. ಬೆಂಗಳೂರಿನ ಹತ್ತಿರ ಜಿಲ್ಲೆಗಳಿಗೆ 300 ಕಿ. ಮೀ ವ್ಯಾಪ್ತಿಯಲ್ಲಿ ಸಂಚರಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Driving -Bangalore-Mysore- KSRTC- Electric Bus.