ತುಮಕೂರು, ಡಿ.೨೪,೨೦೨೪ : ಮಧುಗಿರಿ ಉಪಕಾರಾಗೃಹದಿಂದ ಡ್ರೋನ್ ಪ್ರತಾಪ್ ಬಿಡುಗಡೆ ಹಿನ್ನೆಲೆ.. ಜೈಲಿಂದ ಹೊರಬಂದು ಡ್ರೋನ್ ಪ್ರತಾಪ್ ಹೇಳಿಕೆ. ಜೈಲಿಂದ ಹೊರಬಂದು ನ್ಯಾಯ ಬೇಕು ಎಂದ ಡ್ರೋನ್ ಪ್ರತಾಪ್. ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡ ಡ್ರೋನ್ ಪ್ರತಾಪ್.
9 ದಿನಗಳ ಸೆರೆವಾಸದಿಂದ ಡ್ರೋನ್ ಪ್ರತಾಪ್ ಮುಕ್ತ. ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಪೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ರೋಣ್ ಪ್ರತಾಪ್ ನನ್ನು ನಾಲ್ಕನೇ ಹೆಚ್ಚುವರಿ ಸೆಕ್ಷನ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಕಲೊಟಿ ಗ್ರಾಮದ ಬಳಿ ಕೃಷಿಹೊಂಡದಲ್ಲಿ ಸೋಡಿಯಂ ಸ್ಪೋಟ ಪ್ರಯೋಗ ಮಾಡಿದ್ದರು. ಸೋಡಿಯಂ ಸ್ಪೋಟದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಡ್ರೋಣ್ ಪ್ರತಾಪ್ ಅಪ್ಲೋಡ್ ಮಾಡಿದರು ಸೋಡಿಯಂ ಸ್ಪೋಟದ ವಿಡಿಯೋವನ್ನು ಆಧರಿಸಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿ ಕೊಂಡು ಡ್ರೋಣ್ ಪ್ರತಾಪ್ ನನ್ನು ಬಂಧಿಸಿದರು. ನಂತರ ನ್ಯಾಯಾಲಯ ಡಿಸೆಂಬರ್ 16 ರಂದು 10 ದಿನಗಳವರೆಗೆ ಡ್ರೋಣ್ ಪ್ರತಾಪ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು
ಡ್ರೋಣ್ ಪ್ರತಾಪ್ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಜೈಲಿನಿಂದ ಡ್ರೋನ್ ಪ್ರತಾಪ್ ಇಂದು ಬಿಡುಗಡೆ. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಪ್ರತಾಪ್ ಹೇಳಿದಿಷ್ಟು…
ಒಂದೇ ಒಂದು ಪ್ರಶ್ನೇ ಕೇಳ್ತೀನಿ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲಾ,ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರಾ. ಹೊರದೇಶದಲ್ಲಿ ಇರಬಹುದು, ನಮ್ಮ ದೇಶದಲ್ಲಿರಬಹುದು. ಐಪಿಸಿ ದೇಶದಲೆಲ್ಲಾ ಒಂದೇ,ಕಾನೂನು ಎಲ್ರಿಗೂ ಒಂದೇ..
ಕೇಜಿಗಟ್ಟಲೇ ಸೋಡಿಯಂ ಉಪಯೋಗಿಸಿ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ.. ಯಾರಾದ್ರು ಮೊಬೈಲ್ ಕೊಡಿ ಸರ್,ತೋರಿಸ್ತೀನಿ. ನಮ್ಮ ದೇಶದವರೇ,ಜಾಸ್ತಿ ಜನ ಸಬ್ ಸ್ಕ್ರೈಬರ್ ಹೊಂದಿರೋ ಯೂಟ್ಯೂಬ್ ಚಾನೆಲ್ ಗಳು ಈ ರೀತಿ ಮಾಡಿವೆ. ತುಂಬಾ ಜನ ಯೂಟ್ಯೂಬರ್ಸ್ ಈ ರೀತಿ ಪ್ರಯೋಗ ಮಾಡಿದ್ದಾರೆ. ಯಾರ ಮೇಲೂ ಕೇಸ್ ಆಗದೇ ಇರೋದು,ಪ್ರಶ್ನೆ ಮಾಡದೇ ಇರೋದು. ನನ್ನ ಮೇಲೆ ಏಕೆ ಅಂತಾ ನೀವೆ ಹುಡುಕಬೇಕು.
ನಾನು ಮಾಡಿರೋದು ಸೈನ್ಸ್ ಅಂಡ್ ಎಜುಕೇಷನ್ ಪರ್ಪಸ್.. ಮೊದಲೇ ಡಿಸ್ಕೈಮರ್ ಹಾಕಿ ಮಾಡಿದ್ದೇನೆ. ಸಿಂಪಲ್ ಸೈನ್ಸ್ ಎಕ್ಸ್‌ಪೆರಿಮೆಂಟ್, ಕಾಲೇಜು,ಸ್ಕೂಲ್ ಗಳಲ್ಲಿ ಸೋಡಿಯಂ ಸುಲಭವಾಗಿ ಸಿಗೋ ಮೆಟಿರಿಯಲ್. ಅದಕ್ಕೆ ಎಕ್ಸ್‌ಪ್ಲೋಸಿವ್ ಅದು ಇದು ಅಂತಾ ಮಾಡೋದು ಅಗತ್ಯ ಇರಲಿಲ್ಲಾ. ನನ್ನ ಮೇಲೆ ಆಗಿರೋದು,ಅವರ ಮೇಲೆ ಯಾಕೆ ಅಗಿಲ್ಲಾ. ನನಗಿಂತಾ ಮೊದಲೇ ಅವ್ರೆಲ್ಲಾ ಮಾಡಿದ್ದಾರೆ. ಐಪಿಸಿ ಅಂದರೇ ಇಂಡಿಯಾ ಪೂರ್ತಿ ಒಂದೇ.
ಅದು ಅರ್ಟಿಫಿಷಿಯಲ್ ಪಾಂಡ್. ಅವ್ರ ಮೇಲೆ ಏನು ಅಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೇ. ನನ್ನ ಟಾರ್ಗೆಟ್ ಮಾಡ್ತಾರೆ ಅಂದ್ರೆ ನನಗೆ ನ್ಯಾಯ ಬೇಕು ಸರ್. ಮಧುಗಿರಿ ಉಪಕಾರಾಗೃಹದ ಬಳಿ ಡ್ರೋನ್ ಪ್ರತಾಪ್ ಹೇಳಿಕೆ.
key words: “I want justice”, Drone Pratap, speaks to, the media, release from prison.
SUMMARY:
“I want justice”: Drone Ptap speaks to the media after his release from prison.
Drone Pratap’s release from Madhugiri Sub-Jail. Drone Pratap’s statement after coming out of jail. Drone Pratap said he wants justice . Drone Pratap broke down in tears in front of the media.