ಮೈಸೂರು,ಜುಲೈ,18,2023(www.justkannada.in): IFFCO (ಇಫ್ಕೋ) ಹಾಗೂ ಥ್ಯಾನೋಸ್ ಏರೋಸ್ಪೇಸ್ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ನಿರುದ್ಯೋಗಿ ಯುವಕರಿಗೆ ಡ್ರೋಣ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಗ್ಮಿ ಏರೋಸ್ಪೇಸ್ ಸಭಾಂಗಣದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನ ಇಫ್ಕೋ ಅಧ್ಯಕ್ಷ ದಿಲೀಪ್ ಸಂಗಾನಿಯಾ ಉದ್ಘಾಟಿಸಿದರು. ಕೃಷಿಯಲ್ಲಿ ಡ್ರೋನ್ ಬಳಕೆಗೆ ಬೇಕಾದ ಪರವಾನಿಗೆಗಾಗಿ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದ್ದು, ಕೃಷಿ ಡ್ರೋನ್ ಬಳಸಲು DGCA ಅನುಮೋದಿತ ಸರ್ಟಿಫಿಕೇಟ್ ಅಗತ್ಯ ಹಿನ್ನಲೆ, ದೇಶವ್ಯಾಪಿ 2500 ಡ್ರೋಣ್ ಗಳನ್ನ IFFCO ವಿತರಣೆ ಮಾಡುತ್ತಿದೆ.
ಗ್ರಾಮೀಣ ಭಾಗದ ವಾಣಿಜ್ಯೋದ್ಯಮಿಗಳಿಗೆ ಉತ್ತೆಜನ ನೀಡಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ರಸಗೊಬ್ಬರ ಬದಲು ನ್ಯಾನೋ ರಸಗೊಬ್ಬರಗಳ ಬಳಕೆಗೆ ಈ ಡ್ರೋಣ್ ಸಹಾಯಕವಾಗಿರಲಿದೆ.
ಇನ್ನು ಡ್ರೋಣ್ ಪರವಾನಗಿಗಾಗಿ ದೇಶವ್ಯಾಪಿ 2500 ಮಂದಿ ಆಯ್ಕೆಯಾಗಿದ್ದು, ಮೈಸೂರು ಮತ್ತು ಚೆನೈಗಳಲ್ಲಿ ಮಾತ್ರ ಡ್ರೋಣ್ ತರಬೇತಿ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ದಾರೆ.
Key words: Drone -training – unemployed -youth -Mysore.