ಚಿಕ್ಕಮಗಳೂರು,ಸೆಪ್ಟಂಬರ್,14,2020(www.justkannada.in): ಹೋಂ ಸ್ಟೇಗಳಲ್ಲಿ ಡ್ರಗ್ಸ್ ಪತ್ತೆಯಾದ್ರೆ ಅದಕ್ಕೆ ಹೋಂ ಸ್ಟೇ ಮಾಲೀಕರೇ ಹೊಣೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಡಿಜಿ&ಐಜಿಪಿ ಪ್ರವೀಣ್ ಸೂದ್, ಮಾದಕ ದ್ರವ್ಯಗಳ ಬಗ್ಗೆ ಹೋಂ ಸ್ಟೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ ರಿವಾರ್ಡ್ ನೀಡುತ್ತೇವೆ. ಆದರೆ ಪ್ರಕರಣ ಮುಚ್ಚಿ ಹಾಕಿದರೆ ಅದಕ್ಕೆ ಹೋಂ ಸ್ಟೇ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಡ್ರಗ್ ಕಂಟ್ರೋಲ್ ಮಾಡುವುದು ವಿಶೇಷ ಪಡೆ ಮಾತ್ರವಲ್ಲ, ಪೊಲೀಸರು ಕೂಡ ಡ್ರಗ್ಸ್ ದಂಧೆ ಕಂಟ್ರೋಲ್ ಮಾಡಬೇಕು ಎಂದು ಪ್ರವೀಣ್ ಸೂದ್ ತಿಳಿಸಿದರು.
Key words: Drug- Detection- Owners – responsible – home stays-DG & IGP- Praveen Sood