ಮುಂಬೈ, ಸೆಪ್ಟೆಂಬರ್, 07,2020(www.justkannda.in): ನಟಿ ರಿಯಾ ಚಕ್ರವರ್ತಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಕಚೇರಿಗೆ ಆಗಮಿಸಿದ್ದಾರೆ.
ರಿಯಾ ಚಕ್ರವರ್ತಿ ಅವರನ್ನು ಎನ್ ಸಿ ಬಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾನುವಾರ ಆರು ಗಂಟೆಗಳ ಕಾಲ ಎನ್ಸಿಬಿ ಅಧಿಕಾರಿಗಳು ರಿಯಾರನ್ನು ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎನ್ಸಿಬಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಮುತಾ ಅಶೋಕ್ ಜೈನ್, ರಿಯಾರನ್ನು ಸೋಮವಾರ ಕೂಡ ಮತ್ತೆ ಕರೆಯಿಸಿಕೊಂಡು ಅವರ ಹೇಳಿಕೆಗಳನ್ನ ರೆಕಾರ್ಡ್ ಮಾಡಲಾಗುವುದು ಎಂದು ತಿಳಿಸಿದ್ದರು.