ಮೈಸೂರು, ಸೆಪ್ಟೆಂಬರ್,06,2020(www.justkannda.in) : ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ನಗರದ ಇನ್ಸ್ಟಿಟ್ಯೂಟ್ ಆಪ್ ಎಂಜಿನಿಯರಿಂಗ್ ಸಭಾಂಗಣದಲ್ಲಿ ರೈತ ಸಂಘ ಕಬ್ಬು ಬೆಳೆಗಾರರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿ ವತಿಯಿಂದ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಭೆಯಲ್ಲಿ ಅವರು ಮಾತನಾಡಿದರು.
ಯಾರೆಲ್ಲ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು. ಸಮಾಜವನ್ನು ತಪ್ಪುದಾರಿಗೆ ಎಳೆಯುವಂತೆ ಕೆಲಸ ಇದಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಜನವಿರೋಧಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಕರೆ
ಜನವಿರೋಧಿ ಕಾಯಿದೆಗಳ ವಿಚಾರವಾಗಿ ಜನಾಸಾಮಾನ್ಯರಿಗೆ ಅರಿವು ಮೂಡಿಸುವುದರ ಜೊತೆ ರೈತ ಸಂಘದ ಹೋರಾಟವನ್ನು ಜನಾಂದೋಲವಾಗಿ ಪರಿವರ್ತಿಸಲು ಚಿಂತನೆ ನಡೆಸಿದೆ ಎಂದರು.
ಕರೋನಾ ವಾರಿಯರ್ಸ್ ನಿಂದ ದಸರಾ ಉದ್ಘಾಟನೆ ವಿಚಾರ ಸಂಬಂಧಿಸಿದಂತೆ ಮಾತನಾಡಿ, ತಾತ್ವಿಕವಾಗಿ ದಸರಾ ಆಚರಣೆ ಬೇಡ ಎಂಬುದನ್ನ ನಾವು ಹೇಳಿದ್ದೇವೆ. ಕೋರೊನಾ ವ್ಯಾಪಕವಾಗಿ ಹರಡುತ್ತಿದೆ. ಸಾವು, ನೋವುಗಳು ಸಂಭವಿಸುತ್ತಿವೆ. ಸಾರ್ವಜನಿಕವಾಗಿ ಆಚರಣೆ ಮಾಡುವುದು ಬೇಡ ಎಂದರು.
ಕೊರೊನಾ ವಾರಿಯರ್ ಪೌರಕಾರ್ಮಿಕರಿಂದ ದಸರಾ ಉದ್ಘಾಟನೆಯಾಗಲಿ
ಸರಳ ಅಂತ ಸರ್ಕಾರ ಹೇಳುತ್ತಿದೆ. ಸಾಂಪ್ರದಾಯಿಕ ನೆಲೆಯಲ್ಲಿ ದಸರಾ ಆಚರಣೆ ಮಾಡುವುದಾದರೆ ಕೊರೊನಾ ವಿರುದ್ಧ ಹೋರಾಟ ಮಾಡಿದ ಸಾಮಾನ್ಯ ವ್ಯಕ್ತಿಯಿಂದ ಉದ್ಘಾಟನೆ ಮಾಡಿಸಬೇಕು. ಅದರಲ್ಲು ಇಡೀ ಸಮಾಜವನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿದರೆ ಉತ್ತಮ. ಇದರಿಂದ ಇಡಿ ವರ್ಗಕ್ಕೆ ಗೌರವ ಸಲ್ಲಿಸದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಾಹಿತಿ ದೇವನೂರು ಮಹದೇವು, ಕರ್ನಾಟಕ ರಾಜ್ಯ ರೈತಸಂಘ, ರಾಜ್ಯ ಕಬ್ಬು ಬೆಳೆಗಾರಾರ ಸಂಘ, ಹಾಗೂ ವಿವಿಧ ಪ್ರಗತಿಪರ ಹೋರಟಗಾರು ಸಭೆಯಲ್ಲಿ ಭಾಗಿಯಾಗಿದ್ದರು.
key words : Drugs-Center-Let-State-Government-take-tough-decision-Farmer-leader-Badagalpur Nagendra