ಲೈಂಗಿಕ ದೌರ್ಜನ್ಯ ಪ್ರಕರಣ: DYSP ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ

ತುಮಕೂರು,ಜನವರಿ,4,2025 (www.justkannada.in):  ದೂರು ನೀಡಲು ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ  ಮಧುಗಿರಿ ಉಪವಿಭಾಗದ ಡಿವೈ ಎಸ್ ಪಿ ರಾಮಚಂದ್ರಪ್ಪಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ಜೆ ಎಂ ಎಫ್ ಸಿ ಕೋರ್ಟ್ ಆದೇಶಿಸಿದೆ.

ಪ್ರಕರಣ ಸಂಬಂಧ ಇಂದು ಡಿವೈಎಸ್ ಪಿ ರಾಮಚಂದ್ರಪ್ಪರನ್ನು ಮಧುಗಿರಿ ಜೆ ಎಂ ಎಫ್ ಸಿ ಕೋರ್ಟ್ ಗೆ  ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯ ಆರೋಪಿ ಡಿವೈಎಸ್ ಪಿ ರಾಮಚಂದ್ರಪ್ಪಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಜಮೀನು ವ್ಯಾಜ್ಯ ವಿಚಾರವಾಗಿ ದೂರು ನೀಡಲು ಬಂದಿದ್ದ ಪಾವಗಡ ಮೂಲದ ಮಹಿಳೆಯನ್ನು ಮಾತುಕತೆಗೆ ಎಂದು ಕಚೇರಿಗೆ ಕರೆಸಿಕೊಂಡಿದ್ದ ಡಿವೈಎಸ್ ಪಿ ರಾಮಚಂದ್ರಪ್ಪ , ಮಹಿಳೆಯನ್ನು ಪುಸಲಾಯಿಸಿ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ವೈರಲ್ ಆಗಿತ್ತು.  ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿನ್ನೆ ರಾತ್ರಿ ಡಿವೈ ಎಸ್ ಪಿ ರಾಮಚಂದ್ರಪ್ಪ ಬಂಧನವಾಗಿತ್ತು.

Key words: DYSP, Ramachandrappa, 14 days,  judicial custody