ಬೆಂಗಳೂರು,ಮಾರ್ಚ್,10,2021(www.justkannada.in) : ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಮಹಿಳಾ ಸಬಲೀಕರಣ ಮಾಡಲು ಹೊರಟಿರುವ ಉಬುಂಟು ಒಕ್ಕೂಟದ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.ಎಫ್‌ಕೆಸಿಸಿಐ ಎಂವಿ ಆಡಿಟೋರಿಯಂನಲ್ಲಿ ಉಬುಂಟು, ಎಫ್‌ಕೆಸಿಸಿಸಿಐ ಮತ್ತು ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್‌ಪ್ರೆನ್ಯೂರ್‌ಶಿಪ್ (ಗೇಮ್) ಸಹಯೋಗದಲ್ಲಿ ಬುಧವಾರ ಕರ್ನಾಟಕದ ಮಹಿಳಾ ಸ್ವಾಮ್ಯದ ಸೂಕ್ಷ್ಮ ವ್ಯವಹಾರಗಳನ್ನು ಬೆಂಬಲಿಸುವ 6 ತಿಂಗಳ ವೇಗವರ್ಧಕ ಕಾರ್ಯಕ್ರಮವಾದ ಎಕ್ಸ್‌ಲೆರೇಟರ್ ಬೆಂಗಳೂರು’(ಎಕ್ಸ್‌ಬಿ) ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರ ದೊಡ್ಡದಿದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಬಜೆಟ್ ಘೋಷಣೆ ಮಾಡಿದ್ದೇನೆ. ಈ ಆಯವ್ಯಯದಲ್ಲಿ 37,188 ಕೋಟಿ ರೂ. ಅನುದಾನವನ್ನು ಮಹಿಳಾ ಸಬಲೀಕರಣಕ್ಕಾಗಿಯೇ ಮೀಸಲಿಟ್ಟಿದ್ದೆವೆ. ಇದರಲ್ಲಿ ಪ್ರಮುಖವಾಗಿ ಎಲಿವೇಟ್ ಮಹಿಳಾ ಕಾರ್ಯಕ್ರಮ, ಮಹಿಳಾ ಪಾರ್ಕ್ ಸೇರಿದಂತೆ ಸಣ್ಣ ಹಾಗೂ ಸೂಕ್ಷ್ಮ ಉದ್ಯಮಿಗಳು, ಗ್ರಾಮೀಣ ಭಾಗದ ಸ್ವಸಹಾಯ ಗುಂಪುಗಳಿಗೂ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.
ಸರ್ಕಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಉಬುಂಟು ಸಂಸ್ಥಾಪಕಿ ರತ್ನಪ್ರಭಾ ಮಾತನಾಡಿ, 26 ಮಹಿಳಾ ಸಂಘಗಳಿಂದ ಉಬುಂಟು ಒಕ್ಕೂಟದಲ್ಲಿ ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆಯನ್ನು ಉಬುಂಟು ಎತ್ತಿ ತೋರಿಸಿದೆ. ಪ್ರತಿ ಜಿಲ್ಲೆಯಲ್ಲೂ ಮಹಿಳಾ ಉದ್ಯಮಿಗಳನ್ನು ಮುಖ್ಯವೇದಿಕೆಗೆ ತರುವ ಕೆಲಸವನ್ನು ತಳಮಟ್ಟದಲ್ಲಿ ಉಬುಂಟು ಮಾಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಪ್ರತಿ ಜಿಲ್ಲೆಗಳು ಲಕ್ಷ ರೂಗಳಂತೆ 30 ಲಕ್ಷ ರೂ. ಗಳನ್ನು ಉಬುಂಟು ಒಕ್ಕೂಟಕ್ಕೆ ಮೀಸಲಿಟ್ಟರೆ, ಸರ್ಕಾರ ಮಾಡಬೇಕಿದ್ದ ಬಹುತೇಕ ಕೆಲಸವನ್ನು ನಮ್ಮ ಒಕ್ಕೂಟ ಮಾಡುತ್ತಿದೆ.
ಯಡಿಯೂರಪ್ಪ ಅವರು ಮಹಿಳೆಯರಿಗಾಗಿಯೇ ಪ್ರತ್ಯೇಕ ಬಜೆಟ್ ಘೋಷಣೆಯ ರೀತಿಯಲ್ಲಿ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟಿರಿವುದು ಸಂತಸ ತಂದಿದೆ ಅವರಿಗೆ ಅಭಿನಂದನೆಗಳು ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಗೇಮ್‌ನ ಸಹ-ಸಂಸ್ಥಾಪಕ ಮದನ್ ಪಡಕಿ, ಗೇಮ್‌ನ ಸಹ ಸಂಸ್ಥಾಪಕ ಮದನ್ ಪ್ರಸಾದ್, ಎಸ್‌ಐಡಿಬಿಐ ಉಪ ವ್ಯವಸ್ಥಾಪಕ ವಿ ಸತ್ಯ ವೆಂಕಟ ರಾವ್ ಮತ್ತು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳ ಕುರಿತು ವಿಚಾರ ಗೋಷ್ಠಿ ನಡೆಸಲಾಯಿತು.
key words : Each-district-Separate-Grants-Ubuntu-Confederacy-Demand-
CM B.S.Yeddyurappa-Positive-Responsiveness