ಮೈಸೂರು, 07,11,2022 (www.justkannada.in): ವಿವಿಯಲ್ಲಿ ಮಹನೀಯರ ಅಧ್ಯಯನ ಪೀಠ ಸ್ಥಾಪನೆ ಮಾಡುವುದರಿಂದ ಸಮಾಜಕ್ಕೆ ಮಹಾನ್ ಪುರುಷರು ನೀಡಿರುವ ಕೊಡುಗೆಯನ್ನು ಸ್ಮರಿಸಬಹುದಾಗಿದೆ ಎಂದು ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸುವರ್ಣಗಂಗೋತ್ರಿಯಲ್ಲಿ ಕಬಿನಿ ಕುಡಿಯುವ ನೀರಿನ ಕಾಮಗಾರಿ, ಪ್ರಾರಂಭ, ಮಂಟೇಸ್ವಾಮಿ ಮಹಾಕಾವ್ಯದ ಶ್ರವ್ಯ ಮತ್ತು ದೃಶ್ಯ ಸರಣಿ ಬಿಡುಗಡೆ, ಧರೆಗೆ ದೊಡ್ಡವರು ಕಾವ್ಯದ ಏಳು ಪಠ್ಯಗಳು-ಪುಸ್ತಕ ಬಿಡುಗಡೆ ಹಾಗೂ ಕುಲಪತಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವಿವಿ ಶತಮಾನೋತ್ಸವ ಆಚರಿಸಿದೆ. ಅನೇಕ ಅಧ್ಯಯನ ಪೀಠಗಳಿವೆ. ಇಂತಹ ಅಧ್ಯಯನ ಪೀಠದಲ್ಲಿ ಕಳೆದ ವರ್ಷ ಚಾಮರಾಜನಗರದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿ ಅಧ್ಯಯನ ಪೀಠ ತೆರೆಯಲಾಗಿದೆ. ನಡೆದು ಬಂದ ಹಾದಿ ಗುರುತಿಸುವುದು. ಅವರ ಆಶಯ ಮತ್ತು ಧ್ಯೇಯಗಳನ್ನು ಸಮಾಜಕ್ಕೆ ಸಿಗುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಈ ಪೀಠವನ್ನು ಸುತ್ತೂರು ಶ್ರೀಗಳು ಪ್ರಾರಂಭಿಸಿದರು. ಆರಂಭಿಸಿದ ಒಂದೇ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಹನೂರು ಕೃಷ್ಣಮೂರ್ತಿ ಅವರು ಸ್ಥಾಪಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಅನೇಕ ಶತಮಾನದಿಂದ ಮಂಟೇಸ್ವಾಮಿ ಅವರು ಹೇಗೆ ಬದುಕನ್ನು ಕಟ್ಟಿಕೊಂಡು ಬಂದಿದ್ದಾರೆ ಎಂಬುದು ಶ್ಲಾಘನೀಯ ಕಾರ್ಯ. ಮಳವಳ್ಳಿ ಮಹದೇವಸ್ವಾಮಿ ಅವರಿಗೆ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ನೀಡಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಚಾಮರಾಜನಗರಕ್ಕೆ ಎಲ್ಲಾ ಬಗೆಯ ಸೌಲಭ್ಯ ನೀಡಲು ನನಗೆ ಖುಷಿ ನೀಡಿದೆ. ಮೈವಿವಿಯಲ್ಲಿ 17 ಬೋರ್ವೆಲ್ನಲ್ಲಿ ಇದೆ. ಅದರಲ್ಲಿ 10 ಬೋರ್ವೆಲ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಬರುವ ನೀರು ಕಲುಷಿತಗೊಂಡಿದೆ. ಹಾಗಾಗಿ ಕೆಆರ್ಎಸ್ನಿಂದ ನೀರನ್ನು ವಿವಿಗೆ ಹರಿಸಲು ಯೋಜನೆ ಹಾಕಿಕೊಂಡಿದ್ದೇವೆ. ಶೀಘ್ರದಲ್ಲೇ ಇದು ನೆರವೇರುವ ವಿಶ್ವಾಸವಿದೆ. ಆದರೆ, ಚಾಮರಾಜನಗರ ಸ್ನಾತಕೋತ್ತರ ಕೇಂದ್ರಕ್ಕೆ ಕಬಿನಿ ನೀರು ನೀಡುತ್ತಿರುವುದು ಖುಷಿಪಡುವ ವಿಷಯ. ವಿಜ್ಞಾನ ಕಾಲೇಜು ತೆರೆಯಲು 5 ಕೋಟಿ ಹಣ ನಿಗದಿಯಾಗಿದೆ. 15 ದಿನದಲ್ಲಿ ಅದು ಪ್ರಾರಂಭವಾಗಲಿದೆ. ಎಂದು ಹೇಳಿದರು.
ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಅವರು ಸಾನಿಧ್ಯ ವಹಿಸಿದ್ದರು. ಕುಲಸಚಿವ ಪ್ರೊ.ಆರ್.ಶಿವಪ್ಪಘಿ, ಪ್ರಸಾರಂಗದ ನಿರ್ದೇಶಕ ನಂಜಯ್ಯ ಹೊಂಗನೂರು, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊಘಿ.ಆರ್.ಮಹೇಶ್, ಪ್ರೊ.ನಂಜುಂಡಸ್ವಾಮಿ, ಕೃಷ್ಣಮೂರ್ತಿ ಹನೂರು ಸೇರಿದಂತೆ ಇತರರು ಇದ್ದರು.