ಮಯನ್ಮಾರ್, ಥೈಲ್ಯಾಂಡ್‌ ನಲ್ಲಿ ಭಾರೀ ಭೂಕಂಪ: ಸಹಾಯ ಮಾಡಲು ಭಾರತ ಸಿದ್ಧ- ಪ್ರಧಾನಿ ಮೋದಿ ಟ್ವಿಟ್

ನವದೆಹಲಿ,ಮಾರ್ಚ್,28,2025 (www.justkannada.in): ಮ್ಯಾನ್ಮಾರ್‌ ಹಾಗೂ ಥೈಲ್ಯಾಂಡ್‌ ನಲ್ಲಿ ಪ್ರಬಲ ಭೂಕಂಪ  ಸಂಭವಿಸಿದ್ದು,  7.7 ಮತ್ತು 6.4 ತೀವ್ರತೆ ದಾಖಲಾಗಿದೆ.

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬಲವಾದ ಭೂಕಂಪದಿಂದಾಗಿ ಬೃಹತ್‌ ಕಟ್ಟಡ ನೆಲಸಮವಾಗಿದೆ.  ಮಯನ್ಮಾರ್ ನಲ್ಲಿ ಇಂದು 7.7 ತೀವ್ರತೆಯ ಭೂಕಂಪ ಮತ್ತು 6.8 ತೀವ್ರತೆಯ ಭೂಕಂಪ ಸಂಭವಿಸಿದೆ.  ಭೂಕಂಪನದಿಂದಾಗಿ ಬ್ಯಾಂಕಾಕ್ ನಲ್ಲಿ ಕೆಲವು ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಥೈಲ್ಯಾಂಡ್ ಪ್ರಧಾನಿ ಪೆಟೊಂಗ್ಟಾರ್ನ್ ಶಿನವಾತ್ರ ಅವರು ಬಿಕ್ಕಟ್ಟನ್ನು ಪರಿಶೀಲಿಸಲು “ತುರ್ತು ಸಭೆ ನಡೆಸಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಷರಾಮಿ ಕಟ್ಟಡಗಳು ಸೇತುವೆಗಳು ನೋಡು ನೋಡುತ್ತಲೇ ಧರೆಗಪ್ಪಳಿಸಿವೆ.  ಅವಶೇಷಗಳಡಿ ನೂರಾರು ಮಂದಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಸಹಾಯಕ್ಕೆ ಭಾರತ ಸಿದ್ದ- ಪ್ರಧಾನಿ ಮೋದಿ

ಮ್ಯಾನ್ಮಾರ್‌ ಹಾಗೂ ಥೈಲ್ಯಾಂಡ್‌ ಪ್ರಬಲ ಭೂಕಂಪಕ್ಕೆ ಕಳವಳ ವ್ಯಕ್ತಪಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಸುರಕ್ಷತೆ ಯೋಗಕ್ಷೇಮಕ್ಕೆ ಪ್ರಾರ್ಥಿಸುತ್ತೇನೆ.  2 ದೇಶಗಳ  ಸಂಪರ್ಕದಲ್ಲಿ ಅಧಿಕಾರಿಗಳಿದ್ದಾರೆ. ಭಾರತದಿಂದ ಸಾಧ್ಯವಾದ ಸಹಾಯ ಮಾಡುತ್ತೇವೆ ಎಂದಿದ್ದಾರೆ.

ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದಿದ್ದಾರೆ.

Key words:  earthquake, Myanmar, Thailand, help, PM Modi