ಭಾರತದ ಹಲವು ರಾಜ್ಯಗಳಲ್ಲಿ ಭೂ ಕಂಪನದ ಅನುಭವ

ಬೆಂಗಳೂರು, ಮಾರ್ಚ್ 22, 2023 (www.justkannada.in): ಭಾರತದ ಅನೇಕ ರಾಜ್ಯಗಳಲ್ಲಿ ಸುಮಾರು 2 ನಿಮಿಷಗಳ ಕಾಲ ಭೂಮಿ ಬಲವಾಗಿ ನಡುಗಿರುವುದು ಅಥವಾ ಕಂಪಿಸಿರುವುದು ಕಂಡುಬಂದಿದೆ.

ಅಫ್ಘಾನಿಸ್ತಾನದ ಹಿಂದು ಕುಶ್​ ವಲಯದಲ್ಲಿ ಮಂಗಳವಾರ ಸಂಜೆ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಅಫ್ಘಾನಿಸ್ತಾನದ ಫೈಜಾಬಾದ್‌ನ ಆಗ್ನೇಯ ಭಾಗದ ಸುಮಾರು 133 ಕಿ.ಮೀ ದೂರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ.

ಉತ್ತರ ಭಾರತ ಮಾತ್ರವಲ್ಲದೆ, ಪಾಕಿಸ್ತಾನದ ಕೆಲವು ನಗರಗಳು ಸಹ ಭೂಕಂಪನ ಅನುಭವಿಸಿವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಭೂಕಂಪನಕ್ಕೆ ಸಾಕ್ಷಿಯಾಗಿ ಸಾಕಷ್ಟು ಮಂದಿ ವಿಡೀಯೋ ಹಂಚಿಕೊಂಡಿದ್ದಾರೆ.