ಮೈಸೂರು,ಅಕ್ಟೋಬರ್,11,2020(www.justkannada.in): ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಾಗಾಗಿರುವ ಮೈಸೂರು ಮಹಾನಗರ ಪಾಲಿಕೆ ಇದೀಗ ಆರ್ಥಿಕ ಪುನಶ್ಚೇತನಕ್ಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಸ್ವಂತ ನಿರ್ವಹಣೆಯ ಸಂಕಷ್ಟಕ್ಕೆ ಒಳಾಗಾಗಿರುವ ಮೈಸೂರು ಮಹಾನಗರ ಪಾಲಿಕೆಯ ಪುನಶ್ಚೇತನಕ್ಕೆ ಕಡ್ಡಾಯ ತೆರಿಗೆ ಸಂಗ್ರಹ ಮಾಡಲು ಮೇಯರ್, ಪಾಲಿಕೆ ಸದಸ್ಯರು ಮುಂದಾಗಿದ್ದಾರೆ. ಹೀಗಾಗಿ ಇನ್ಮುಂದೆ ಮೇಯರ್, ಪಾಲಿಕೆ ಸದಸ್ಯರ ನೇತೃತ್ವದಲ್ಲೇ ತೆರಿಗೆ ವಸೂಲಿ ನಡೆಯಲಿದೆ.
ಈ ಕುರಿತು ಮಾತನಾಡಿರುವ ಮೇಯರ್ ತಸ್ನೀಂ, ನಾಳೆಯಿಂದ ಎಲ್ಲಾ ಅಧಿಕಾರಿಗಳು ಮತ್ತು ಸದಸ್ಯರು ಒಟ್ಟಾಗಿ 15 ದಿನ ತೆರಿಗೆ ಸಂಗ್ರಹ ಮಾಡಲಿದ್ದೇವೆ. ಬೆಳಿಗ್ಗೆ 9 ರಿಂದ ಸಂಜೆ 9 ರವರೆಗೆ ತೆರಿಗೆ ಸಂಗ್ರಹ ಮಾಡಲಿದ್ದೇವೆ. ತೆರಿಗೆ ಬಾಕಿ ಇರುವ ಮನೆಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲಾ ಕಡೆ ತೆರಿಗೆ ಸಂಗ್ರಹ ಮಾಡಲಾಗುವುದು. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲೂ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
Key words: Economic Recovery-mysore city corporation-Tax collection – Mayor- Member.