ಡಿ.ಕೆ ಶಿವಕುಮಾರ್ ವಿಚಾರಣೆಗೆ ವಿನಾಯ್ತಿ ನೀಡಲು ಇಡಿ ನಕಾರ: ನಾಳೆಯೇ ಹಾಜರಾಗುವಂತೆ ಮತ್ತೆ ಸಮನ್ಸ್.

ಬೆಂಗಳೂರು,ಅಕ್ಟೋಬರ್,6,2022(www.justkannada.in): ನ್ಯಾಷನಲ್  ಹೆರಾಲ್ಡ್  ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಮತ್ತೆ ಸಮನ್ಸ್ ನೀಡಿದೆ.

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ನಾಳೆ ವಿಚಾರಣೆ ಹಾಜರು ಕುರಿತು ವಿನಾಯ್ತಿ ನೀಡುವಂತೆ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದರು. ಆದರೆ ವಿಚಾರಣೆಗೆ ವಿನಾಯ್ತಿ ನೀಡಲು ನಿರಾಕರಿಸಿರುವ ಇಡಿ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಗೆ ನೋಟಿಸ್ ನೀಡಿದೆ.

ಈ ಕುರಿತು ನಾಗಮಂಗಲದಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ನಾನು ಭಾರತ್ ಜೋಡೋ ಇನ್ ಚಾರ್ಚ್ ಆಗಿದ್ದೇನೆ. ಹೀಗಾಗಿ ನಾಳೆ ವಿಚಾರಣೆಗೆ  ಹಾಜರಾಗಲು ಆಗಲ್ಲ. ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೆ. ಆದರೆ ನಾಳೆಯೇ ಬರಬೇಕೆಂದು ಇಡಿ ಸಮನ್ಸ್ ನೀಡಿದೆ.  ಈ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ನಾಯಕರು ಹೋಗು ಅಂದರೇ ಹೋಗುತ್ತೇನೆ. ಬೇಡ ಅಂದರೇ ಬಿಡ್ತೀನಿ. ಸಭೆ ಬಳಿಕ ಹೋಗಬೇಕೋ ಬೇಡವೋ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

Key words: ED –again-Summons- DK Shivakumar –hearing-tomorrow.

ENGLISH SUMMARY…

ED refuses exemption to DK Shivakumar’s interrogation: Issues summons to present tomorrow
Bengaluru, October 6, 2022 (www.justkannada.in): The Enforcement Directorate has issued summons to KPCC President D.K. Shivakumar to appear before it for interrogation concerning the National Herald scam.
D.K. Shivakumar had pleaded the ED to exempt him from appearing for the interrogation tomorrow as he is taking part in the ‘Bharath Jodo Yatra’. However, the ED has refused to his plea and has issued notice to appear before the ED tomorrow.
Responding to this at Nagamangala today, the Congress leader D.K. Shivakumar informed, “As I am the incharge of the ‘Bharath Jodo Yatra’, I couldn’t appear before the ED for interrogation, and hence I had pleaded for exemption tomorrow. However, they have issued summons to attend tomorrow itself. I will discuss about this with our leaders and will do as they say. I will decide whether I should attend or not after the meeting.”
Keywords: KPCC President/ D.K. Shivakumar/ National Herald case/ ED/ summons