ಮೈಸೂರು,ಅಕ್ಟೋಬರ್,18,2024 (www.justkannada.in): ಮುಡಾ ಹಗರಣ ಸಂಬಂಧ ಮುಡಾ ಕಚೇರಿ ಮೇಲೆ ಇಡಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ನಾನು ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ. ನನ್ನ ಹೋರಾಟಕ್ಕೆ ಗೆಲುವು ನಿಶ್ಚಿತ ಎಂದು ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಸಂಬಂಧಪಟ್ಟವರು ಅಗತ್ಯ ದಾಖಲೆ ನೀಡದಿದ್ದರೆ ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಾರೆ. ಮುಡಾ 50:50 ಹಗರಣ ಪ್ರಕರಣ ಸಂಬಂಧ ನಾನು ಇಡಿ ಬಳಿ ಹಲವು ದಾಖಲೆ ನೀಡಿದ್ದೆ. ಅದಕ್ಕೆ ಪೂರಕ ದಾಖಲೆಗಳ ಸಂಗ್ರಹಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ. ನನ್ನ ಹೋರಾಟಕ್ಕೆ ಸಿಗುತ್ತಿರುವ ಜಯ ಎಂದರು.
ಮೊದಲು ನನ್ನನ್ನ ವ್ಯಂಗ್ಯವಾಗಿ ನೋಡಿದ್ದರು. ಇಡಿಗೆ ಈ ವ್ಯಾಪ್ತಿ ಬರಲ್ಲ ಅಂತ ಹೇಳಿದ್ದರು. ಈಗ ಇಡಿ ಅಧಿಕಾರಿಗಳು ದಾಖಲೆ ಶೋಧ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ನನ್ನ ಹೋರಾಟಕ್ಕೆ ಗೆಲುವು ನಿಶ್ಚಿತ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
ಇಡಿ ಕಾರ್ಯಾಚರಣೆ ಇದು ಕೇವಲ ಸಿದ್ಧರಾಮಯ್ಯ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ ನಡೆಯುತ್ತಿರುವ ತನಿಖೆ. ಪ್ರಕರಣ ಸಿಬಿಐಗೆ ವಹಿಸುವ ಹೋರಾಟ ಮುಂದುವರೆಯಲಿದೆ ಬಹುಶಃ ಮುಂದಿನ ವಾರ ನನ್ನ ಅರ್ಜಿ ವಿಚಾರಣೆಗೆ ಬರಬಹುದು. ಇಡಿ ಕಾರ್ಯಾಚರಣೆಯಿಂದ ನನ್ನಹೋರಾಟಕ್ಕೆ ಪೂರಕವಾಗಬಹದು ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.
Key words: ED, attack, Muda, Complainant, Snehamai Krishna