ಬೆಂಗಳೂರು, ಅಕ್ಟೋಬರ್,17,2024 (www.justkannada.in): ಸಿಎಂ ಮತ್ತು ಡಿಸಿಎಂ ಹೆಸರು ಹೇಳಲು ಇಡಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದರು ಎಂಬ ಮಾಜಿ ಸಚಿವ ಬಿ.ನಾಗೇಂದ್ರ ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ತನಿಖಾ ಸಂಸ್ಥೆ ಆಗಿರಲಿ, ಒಂದು ಪಕ್ಷದ ಪರ ಕೆಲಸ ಮಾಡಬಾರದು. ಇಡಿ, ಸಿಬಿಐ, ಐಟಿ ಯಾವುದೇ ಆಗಲಿ ಬೇಧ ಭಾವ ಇಲ್ಲದೆ ಕೆಲಸ ಮಾಡಬೇಕು. ನನ್ನ ಮತ್ತು ಡಿಸಿಎಂ ಹೆಸರು ಹೇಳುವಂತೆ ಒತ್ತಾಯ ಹಾಕಿದ್ದರಂತೆ ಇಡೀ ಒತ್ತಾಯಿಸಿದ ಬಗ್ಗೆ ಶಾಸಕ ನಾಗೇಂದ್ರ ಅವರೇ ಹೇಳಿದ್ದಾರೆ. ಈ ರೀತಿ ಒತ್ತಡ ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮಾತನಾಡಿದ್ದ ಮಾಜಿ ಸಚಿವ ನಾಗೇಂದ್ರ, ನನ್ನಿಂದ ಯಾವುದೇ ತಪ್ಪು ನಡೆದಿಲ್ಲ. ಆದರೂ, ನನ್ನನ್ನು ಬಂಧಿಸಿದ್ದರು. ಅಲ್ಲದೆ ಈ ಒಂದು ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳುವಂತೆ ಒತ್ತಡ ಹಾಕಿ ಕಿರುಕುಳ ನೀಡಿದ್ದಾರೆ ಎಂದಿದ್ದರು.
Key words: ED, B.Nagendra, investigation, agency, CM Siddaramaiah