ಬೆಂಗಳೂರು,ಸೆ,6,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನ ಇಡಿ ಬಂಧಿಸಿದ್ದು ಈ ಬೆನ್ನಲ್ಲೆ ಮತ್ತೊಬ್ಬ ಮಾಜಿ ಸಚಿವ ಕೆ.ಜೆ ಜಾರ್ಜ್ ವಿರುದ್ದ ಇದೀಗ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತರ ರವಿಕೃಷ್ಣರೆಡ್ಡಿ ಎಂಬುವವರು ಮಾಜಿ ಸಚಿವ ಕೆ.ಜೆ ಜಾರ್ಜ್ ವಿರುದ್ದ ಇಡಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮ ಆಸ್ತಿಯನ್ನು ಕೆ ಜೆ ಜಾರ್ಜ್ ಹೊಂದಿದ್ದಾರೆ. ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ ಗಳಿಕೆ ಹಾಗೂ ಮತ್ತಿತರ ವಿಷಯಗಳ ಮೇಲೆ ಕೇಸ್ ಹಾಕಿದ್ದಾರೆ.
ರಾಜ್ಯದ ಅನೇಕ ಮಂತ್ರಿಗಳು ತಮ್ಮ ಮಕ್ಕಳ, ಸಂಬಂಧಿಕರ ಹೆಸರಲ್ಲಿ ನೂರಾರು ಕೋಟಿ ರೂ. ಅಕ್ರಮ ಆಸ್ತಿ ಮಾಡಿದ್ದಾರೆ ಅಂತ ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
Key words: ED- complains – former minister- KJ George