ನವದೆಹಲಿ,ನವೆಂಬರ್,7,2022(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆ ಸಂಸದ ಡಿ.ಕೆ ಸುರೇಶ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.
ನವದೆಹಲಿಯಲ್ಲಿ ಇಡಿಕಚೇರಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಇಡಿ ಕಿರುಕುಳ ನೀಡುವ ಸಂಸ್ಥೆಯಾಗಿದೆ. ರಾಜಕೀಯ ಕಾರಣಗಳಿಗೆ ಕಿರುಕುಳ ನೀಡುತ್ತಿದ್ದಾರೆ ಅನ್ನಿಸುತ್ತಿದೆ. ಈ ಹಿಂದೆಯೂ ವಿಚಾರಣೆಗೆ ಹಾಜರಾಗಿದ್ದವು. ಆನ್ ಲೈನ್ ನಲ್ಲಿ ದಾಖಲೆ ಸಲ್ಲಿಸುವುದಾಗಿ ಹೇಳಿದ್ದವು. ಆದರೆ ಮತ್ತೆ ವಿಚಾರಣೆಗ ಕರೆದಿದ್ದಾರೆ ಎಂದರು.
ಡಿ.ಕೆ ಶಿವಕುಮಾರ್ ಗೂ ಸಮನ್ಸ್ ನೀಡಿದ್ಧರು. ಆದರೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಡಿ.ಕೆ ಶಿವಕುಮಾರ್ ವಿಚಾರಣೆಗೆ ಹಾಜರಾಗುವುದಿಲ್ಲ. ಡಿಕೆ ಶಿವಕುಆರ್ ವಿಚಾರಣೆಗೆ ಹಾಜರಾಗಲು ಟೈಂ ಕೇಳಿದ್ದಾರೆ. ಈಗ ಬೇರೆ ತನಿಖಾಧಿಕಾರಿಯಿಂದ ಸಮನ್ಸ್ ಬಂದಿದೆ. ವಿಚಾರಣೆ ಬಳಿಕ ತನಿಖಾಧಿಕಾರಿ ಬದಲಾವಣೆ ಬಗ್ಗೆ ಮಾಹಿತಿ ನೀಡುವೆ ಎಂದು ಡಿ.ಕೆ ಸುರೇಶ್ ತಿಳಿಸಿದರು.
Key words: ED – harassing- agency- MP -DK Suresh.