ಮೈಸೂರು, ಜ.೨೨,೨೦೨೫ : ಜಾರಿ ನಿರ್ದೇಶನಾಲಯದ (ಇಡಿ) ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇವೆ. “ಇಡಿ” ಆರ್. ಎಸ್.ಎಸ್ ಮತ್ತು ಬಿಜೆಪಿ ಬಾಲಂಗೋಚಿ ಸಂಸ್ಥೆಯಂತಾಗಿದೆ. ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್ ಹೇಳಿದಿಷ್ಟು..
ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಕೊಡುವಂತಹ ದರ್ದು ನಿಮಗೇನಿತ್ತು. ವಿಚಾರಣೆ ಹಂತದಲ್ಲಿ ಇರುವಾಗಲೇ ಪತ್ರಿಕಾ ಪ್ರಕಟಣೆ ಕೊಡುವ ಅಗತ್ಯ ಇಡಿಗೆ ಏನಿತ್ತು. ಸಿಎಂ ಪತ್ನಿ ಪಡೆದ ಸೈಟ್ ಈಗಾಗಲೇ ಮುಡಾಗೆ ವಾಪಾಸ್ ನೀಡಲಾಗಿದೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳೋದು ಸರಿಯೇ.
ಇಡಿ ಗೆ ತಾಕತ್ತು ಇದ್ರೆ ಜಪ್ತಿ ಮಾಡಿದ್ದೇವೆ ಎಂದು ಹೇಳುವ 142ಸೈಟ್ ಪಟ್ಟಿ ಬಿಡುಗಡೆ ಮಾಡಲಿ. ಇಡಿ ಜಪ್ತಿ ಮಾಡಿರೋ ಸೈಟ್ 168. ಆ 168 ಸೈಟ್ ಗಳಲ್ಲಿ ಸಿಎಂ ಪತ್ನಿ ಪಡೆದ 14ಸೈಟ್ ಗಳು ಇಲ್ಲ. 168 ಸೈಟ್ ಗಳ ಪೈಕಿ 97 ಸೈಟ್ ಗಳು ಬಿಜೆಪಿ, ಜೆಡಿಎಸ್ ನವರಿಗೆ ಸೇರಿರೋದು. ಇಡಿ 14ಸೈಟ್ ಗಳ ಬೆಲೆಯನ್ನ 56 ಕೋಟಿ ಎಂದು ಹೇಳಲಾಗಿದೆ. ಇಡಿ ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ.
ಕೃಷ್ಣಂಗೆ ಹಣ ಎಲ್ಲಿಂದ ಬರುತ್ತೆ..?
ಮೈಸೂರಿನ ಸ್ನೇಹಮಯಿ ಕೃಷ್ಣ, ಮುಡಾ ವಿರುದ್ಧ ಹೋರಾಟ ಮಾಡ್ತಿದ್ದಾರೆ. ಸ್ನೇಹಮಯಿ ಕೃಷ್ಣರಿಗೆ ಕೋರ್ಟ್ ನಲ್ಲಿ ಹೋರಾಟ ಮಾಡಲು ಹಣ ಎಲ್ಲಿಂದ ಬರ್ತಿದೆ. ಇವರ ಬೆನ್ನಿಗೆ ಯಾರಿದ್ದಾರೆ ಎಂದು ಎಂ.ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಕರ್ಮಕಾಂಡ ಬಯಲಿಗೆ ತರುತ್ತೇವೆ. ಯಾರ ಬಳಿ ಹೋಗುತ್ತಾರೆ, ಎಲ್ಲಿಂದ ಹಣ ಬರುತ್ತಿದೆ ಎಂಬ ಮಾಹಿತಿ ಇದೆ. ಎಲ್ಲವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ.
ನಾವು ಸ್ನೇಹಮಯಿ ಕೃಷ್ಣ ವಿರುದ್ಧ ಇಡಿ ಗೆ ದೂರು ನೀಡಿದ್ರೆ ಎಫ್ಐಆರ್ ದಾಖಲು ಮಾಡಲ್ಲ. ಅದೇ ಸ್ನೇಹಮಯಿ ಕೃಷ್ಣ ಮೇಲ್ ಮೂಲಕ ದೂರು ನೀಡಿದ್ರೆ ಸಂಜೆಗೆ ಎಫ್ಐಆರ್ ದಾಖಲು ಆಗುತ್ತದೆ. ಇದು ಇಡಿ ಇಲಾಖೆ ವ್ಯವಸ್ಥೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಲೇವಡಿ ಮಾಡಿದರು.
key words: “ED”, RSS ,BJP, lakshman, congress, mysore, muda
SUMMARY:
We have written to the President against the Enforcement Directorate (ED). It is working in favor of BJP. KPCC spokesperson M Laxman accused.