ಮುಂಬೈ,ಜೂನ್,27,2022(www.justkannada.in): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಶಿವಸೇನಾ ನಾಯಕ, ಸಂಸದ ಸಂಜಯ್ ರಾವತ್ ಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಗೆ ಸಮನ್ಸ್ ಜಾರಿ ಮಾಡಿರುವ ಇಡಿ, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. MHADA ನ 47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್ ರಾವತ್ ಮೇಲಿದೆ. ಭೂ ಅಭಿವೃದ್ಧಿ ಹಗರಣದಲ್ಲಿ ರಾವತ್ಗೆ ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಅತ್ತ ಮಹಾ ಆಘಾಡಿ ಸರ್ಕಾರಕ್ಕೆ ರೆಬಲ್ ಶಾಸಕರು ಬೆಂಬಲ ಹಿಂಪಡೆದಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನದತ್ತ ಸಾಗಿದೆ. ಈ ನಡುವೆ ಇಡಿ ಸಮನ್ಸ್ ಜಾರಿ ಹಿನ್ನೆಲೆ ಸಂಜಯ್ ರಾವತ್ ಗೆ ಸಂಕಷ್ಟ ಎದುರಾಗಿದೆ.
Key words: ED -summons -Shiv Sena- MP- Sanjay Rawat