ಮೈಸೂರು,ಡಿಸೆಂಬರ್,04,2020(www.justkannada.in) : ಶಿಕ್ಷಣ, ಅಧಿಕಾರ, ಹಣಗಳಿಸಿದರು ಜಾತಿ ಬಂಧನದಿಂದ ಹೊರಬರಲಾಗುತ್ತಿಲ್ಲ. ಜಾತಿ ಕೇಳಿ ಹುಟ್ಟುವುದಾಗಿದ್ದರೆ ನಾನು ಮೇಲ್ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಷಾದವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯಗಳ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಕರ್ನಾಟಕ ಘಟಕ ವತಿಯಿಂದ ಸಂತಶ್ರೇಷ್ಠ ಕನಕದಾಸರ ಜಯಂತಿಯ ಪ್ರಯುಕ್ತ ಕನಕಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಮ್ಮ ಅಪ್ಪ ಇದ್ದ ಜಾತಿಯಲ್ಲಿ ನಾವು ಹುಟ್ಟಿದ್ದೇವೆ ಅಷ್ಟೇ ಅದೇ ಜಾತಿಯಲ್ಲಿ ಇರಬೇಕು. ಇವಾಗ ಕನ್ವರ್ಟ್ ಆಗಬಹುದೇನೋ ಅಷ್ಟೇ. ನಾವು ಯಾರು ಕೂಡ ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡವರಲ್ಲ ಎಂದರು.
ಇವನಾರವ,ಇವನಾರವ ಎಂಬುದಕಷ್ಟೇ ಸೀಮಿತವಾಗಿದ್ದಾರೆ
ಬಸವಣ್ಣನ ಜಯಂತಿ ಆಚರಿಸುವವರು ಬಸವಣ್ಣನವರ ವಚನಗಳಲ್ಲಿ ಒಂದಾದ ಇವನಾರವ,ಇವನಾರವ, ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ವಚನದಲ್ಲಿ ಇವನಾರವ ಎಂಬುದಕಷ್ಟೇ ನಿಲ್ಲಿಸಿಬಿಡುತ್ತಾರೆ. ಇವ ನಮ್ಮವ ಎಂದು ಹೇಳುವುದೇ ಇಲ್ಲ. ಜಯಂತಿಗಳ ಆಚರಿಸುವವರು ಮೊದಲು ಆ ಮಹಾನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಮೇಲೆ ಸಮಾಜಕ್ಕೆ ಸಾರಬೇಕು ಎಂದು ಸಲಹೆ ನೀಡಿದರು.
ಕನಕದಾಸರು ಶಿಕ್ಷಣ ಕಲಿತು ಜಗತ್ತಿಗೆ ಸತ್ಯಸಂದೇಶಗಳ ಸಾರಿದ್ದಾರೆ
ಕನಕದಾಸರು ಯುದ್ಧದಲ್ಲಿ ಜ್ಞಾನೋದಯವಾಗಿ ಹಂತ,ಹಂತವಾಗಿ ಬದಲಾವಣೆ ಕಂಡುಕೊಂಡರು. ಧನಕನಕವನ್ನು ದಾನ ಮಾಡಿ ಕನಕನಾದರೂ, ದಾಸರ ಪರಂಪರೆ ಸೇರಿ ಕನಕದಾಸರಾದರು. ಇಂದಿಗಿಂತ ಹಿಂದೆ ಈ ಸಮಾಜವು ಬಹಳ ಶೋಚನೀಯವಾಗಿತ್ತು. ಜಾತಿ, ತಾರತಮ್ಯ,ಅಸಮಾನತೆಗಳು ಹೆಚ್ಚಾಗಿತ್ತು. ಇದರ ನಡುವೆಯೂ ಕನಕದಾಸರು ಶಿಕ್ಷಣ ಕಲಿತು ಜಗತ್ತಿಗೆ ಸತ್ಯಸಂದೇಶಗಳನ್ನು ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ಅಗತ್ಯ
ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ಅಗತ್ಯವಾಗಿದ್ದು, ಎಲ್ಲಾ ಸಾಧಕರು, ವಿಚಾರವಂತರು, ಮಹಾನೀಯರ ಇತಿಹಾಸವನ್ನು ತಿಳಿಸುವ ಕಾರ್ಯವಾಗಬೇಕಿದೆ. ಇದರಿಂದ ಭವಿಷ್ಯವನ್ನು ಸೃಷ್ಟಿಸುವುದಕ್ಕೆ ಸಾಧ್ಯವಿದೆ ಎಂದು ಸಲಹೆ ನೀಡಿದರು.
ಒಗ್ಗಟ್ಟಿಲ್ಲದೇ ಹೋದರೆ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ
565 ಮಂದಿ ರಾಜರ ಜಗಳಗಳ ಸದುಪಯೋಗಪಡಿಸಿಕೊಂಡು ಮೊಗಲರು, ಬ್ರಿಟಿಷರು ಹೀಗೆ ಅನೇಕರು ನೂರಾರು ವರ್ಷಗಳ ಕಾಲ ದೇಶವನ್ನು ಕೊಳ್ಳೆ ಹೊಡೆದರು. ಒಗ್ಗಟ್ಟಿಲ್ಲದೇ ಹೋದರೆ ಹೀಗೆ ನಾವು ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಗುಲಾಮರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಪಡೆದವರು ಜಾತಿ ಸಂಕೋಲೆಯಲ್ಲಿ ಸಿಲುಕದೇ ವಿಶ್ವಮಾನವರಾಗಬೇಕು, ಮಾನವರಾಗಬೇಕು. ಬಸವಣ್ಣನವರ ಚಿಂತನೆಯಂತೆ ಕಾಯಕ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
English summary….
‘Education, power and money is not helping people like us to come out of the clutches of caste’: former CM Siddaramaiah
Mysur, Dec. 4, 2020 (www.justkannada.in): “Despite having an education, enjoying power, and earning money I am still unable to come out of the caste tag. If there was a provision to be born in an upper-caste I would have applied for it,” opine former Chief Minister Siddaramaiah.
Speaking at a programme held at the Vignana Bhavana in Manasagangotri on Friday on the occasion of Kanakadasa Jayanthi he observed that he was born in a caste to which his parents belonged to. “We will continue to be in the same caste. Nobody takes birth on this earth by applying to be born in a specific caste,” he said sarcastically.
He called upon the young literates to shed caste and religion and give preference to humanity.
Keywords: Caste/ Siddaramaiah/ Kanakadasa Jayanthi
key words : Educated-empowered-monetized-Free-caste-bondage-Former CM-Siddaramaiah