ಮೈಸೂರು,ಸೆಪ್ಟಂಬರ್,29,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಸಮುದಾಯಕ್ಕೆ ಹರಡಿದೆ. ನಗರ ಗ್ರಾಮೀಣ ಭಾಗಗಳಲ್ಲೂ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕಳೆದ ಆರು ತಿಂಗಳಿನಿಂದ ಬಂದ್ ಮಾಡಲಾಗಿರುವ ಶಾಲೆಗಳನ್ನ ಆರಂಭಿಸಲು ಇದೀಗ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮ ಮತ್ತು ಸಿದ್ಧತೆ ನಡೆಸುತ್ತಿದೆ.
ಶಾಲೆ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದ್ದು. ಈ ನಡುವೆ ಎಲ್ಲಾ ಶಿಕ್ಷಕರು ಕೊರೊನಾ ಪರೀಕ್ಷೆಗೊಳಪಡಬೇಕಿದೆ. ಹೀಗಾಗಿ ಮೈಸೂರು ಜಿಲ್ಲೆಯ ಶಿಕ್ಷಕರಿಗೆ ನಿನ್ನೆಯಿಂದಲೇ ಕೊರೋನಾ ಪರೀಕ್ಷೆ ಆರಂಭವಾಗಿದೆ. ಮೈಸೂರು ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಶಾಲೆಗಳು ಹಾಗೂ 15 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದು ಇದೀಗ ಎಲ್ಲಾ ಶಿಕ್ಷಕರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊರೋನಾ ಟೆಸ್ಟ್ ಪ್ರಾರಂಭವಾಗಿದ್ದು, ಮೈಸೂರಿನ ಶಿಕ್ಷಕರ ಭವನದಲ್ಲಿ ಕೊರೋನಾ ಪರೀಕ್ಷೆ ನಡೆಯುತ್ತಿದ್ದು, ಜಿಲ್ಲೆಯ ಆಯಾ ತಾಲ್ಲೂಕಿನ ಕೇಂದ್ರಗಳಲ್ಲು ಪರೀಕ್ಷೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Education Department –start- schools-covid test – teachers -Mysore district