ಹಾವೇರಿ,ಸೆಪ್ಟಂಬರ್,2,2021(www.justkannada.in): ಪ್ರಾಥಮಿಕ ಶಾಲೆ ಆರಂಭಿಸುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. ಮಕ್ಕಳ ಆರೋಗ್ಯ ದೃಷ್ಠಿ ಗಮನದಲ್ಲಿರಿಸಿಕೊಂಡು ಶಾಲೆ ಆರಂಭ ಮಾಡಬೇಕಾಗುತ್ತದೆ. 1 ರಿಂದ 5ನೇ ತರಗತಿ ಆರಂಭ ಸಂಬಂಧ ಒಂದು ವಾರ ಅಥವಾ 10 ದಿನ ಕಾದು ನೋಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಪೂರ್ಣ ಪ್ರಮಾಣದ ಶಾಲೆ ಆರಂಭಿಸಿ. ಆನ್ ಲೈನ್ ಕ್ಲಾಸ್ ನಿಂದ ನಮಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳೂ ಹೇಳಿದ್ದಾರೆ. ಒಂದು ವಾರ ಅಥವಾ 10 ದಿನ ಕಾದು ನೋಡಲಾಗುವುದು. ಮೂರನೇ ಅಲೆ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗುತ್ತಿದೆ ಎಂದರು.
ಆಗಸ್ಟ್ 23ರಿಂದ 9,10 ಮತ್ತು ಪಿಯು ತರಗತಿಗಳನ್ನ ಆರಂಭಿಸಿದ್ದೇವೆ. ಇದಕ್ಕೆ ತುಂಬಾ ಒಳ್ಳೆಯ ರೆಸ್ಪಾನ್ಸ್ ನಮಗೆ ಸಿಕ್ಕಿದೆ. 6,7,8 ನೇ ತರಗತಿ ಸೆ.6ರಿಂದ ಪ್ರಾರಂಭವಾಗುತ್ತವೆ. ಪೋಷಕರು ಶಾಲೆಗಳಿಗೆ ಬಂದು ಒಂದನೇ ತರಗತಿಯಿಂದಲೇ ಶಾಲೆ ಪ್ರಾರಂಭಿಸಿ ಎಂದು ಹೇಳಿದ್ದಾರೆ. ಮಕ್ಕಳ ಇಚ್ಚೆ ನೋಡಿಕೊಂಡೇ ಮುಂದಿನ ದಿನಗಳಲ್ಲಿ 1 ರಿಂದ 5ರವರಗೆ ಶಾಲೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ದೇಶಕ್ಕೆ ತಕ್ಕನಾದ ಶಿಕ್ಷಣ ನೀತಿ ಇರಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಶಿಕ್ಷಣ ನೀತಿಯಲ್ಲಿ ಎಲ್ಲೂ ಲೋಪವಾಗಬಾರದು. ಎನ್ ಇಪಿ ನಾಳೆಯೇ ಜಾರಿಯಾಗಲ್ಲ. ಅದು ಜಾರಿಯಾಗಲು 2030ರವರೆಗೂ ಅವಕಾಶವಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.
Key words: Education Minister – Bc Nagesh- start – class 1 to 5