ಮೈಸೂರು.ನವೆಂಬರ್.30.2020(www.justkannada.in): ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕೃತವಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರ ಸುರೇಶ್ ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ವಿಧಾನಸೌಧದಲ್ಲಿ ಚಾಲನೆ ಮಾಡಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆಯನ್ನು ನಡೆಸಬೇಕು ಮತ್ತು ಸಕಾಲದ ಅನುಷ್ಠಾನದ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸಕಾಲ ಸಪ್ತಾಹ ಕಾರ್ಯಕ್ರಮದಿಂದ ಜನ ಸಮಾನ್ಯರಿಗೆ ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳು ಕೈಜೋಡಿಸಬೇಕು. ಪ್ರತಿಯೊಂದು ಇಲಾಖೆಯಲ್ಲೂ ಸಕಾಲ ಸಪ್ತಾಹದ ಬಗ್ಗೆ ಅರಿವು ಮೂಡಿಸಲು ಬ್ಯಾನರ್‍ಗಳನ್ನು ಕಟ್ಟಬೇಕು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸಕಾಲ ಸಪ್ತಾಹ ಕಾರ್ಯಕ್ರಮವು ಮೊದಲ ಹಂತದಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೆ ನಗಾರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಲ್ಲಿ ನಡೆಯಲಿದೆ. 2ನೇ ಹಂತದಲ್ಲಿ ಡಿ.7ರಿಂದ ಡಿ.11ರವರೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ, 3ನೇ ಹಂತದಲ್ಲಿ ಡಿ.14 ರಿಂದ ಡಿ.19ರವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ನಡೆಯಲಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಈ ಸಕಾಲದಲ್ಲಿ ಒಟ್ಟು 1025 ಸೇವೆಗಳು ದೊರೆಯುತ್ತದೆ. ಈಗಾಗಲೇ 22,88,81,652 ಅರ್ಜಿಗಳು ಬಂದಿದ್ದು, 22,82,55,866 ಅರ್ಜಿಗಳು ವಿಲೇವಾರಿ ಆಗಿದೆ. ಸಕಾಲ ಅನುಷ್ಠಾನದಲ್ಲಿ ಮೊದಲ ಮೂರು ಸ್ಥಾನದಲ್ಲಿ ಮಂಡ್ಯ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರ ಇದ್ದು, ಕೊನೆಯ ಮೂರು ಸ್ಥಾನದಲ್ಲಿ ಬೆಂಗಳೂರು ನಗರ, ಬೀದರ್ ಮತ್ತು ರಾಯಚೂರು ಇದೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿರಾದ ಟಿ.ಎಂ. ವಿಜಯ್ ಭಾಸ್ಕರ್, ಸಕಾಲ ಮಿಷನ್ ಅಪಾರ ನಿರ್ದೇಶಕರಾದ ಡಾ.ಬಿ.ಆರ್.ಮಮತಾ, ಅಪಾರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
English summary….
Education Minister Suresh Kumar launches ‘Sakaala Week’
Mysuru, Nov. 30, 2020 (www.justkannada.in): Primary and Secondary Education Minister Suresh Kumar launched the ‘Sakaala Week’ through video conferencing from Vidhana Soudha in Bengaluru.
The ‘Sakaala Week’ is being observed with the objective of expediting the disposal of applications received from the public and create awareness among the people about Sakaala. On the occasion, he instructed that all the Deputy Commissioners should conduct the District Coordinating Committee meeting and ensure implementation of Sakaala programme.
The first phase of the programme will be held from November 30 to December 5 covering Urban Development, Revenue, Transport, Food and Civil Supplies, and Consumer Affairs Departments. While the second phase will be held from December 7 to 11 covering Rural Development and Panchayat Raj Department, the third phase will be held from December 14 to 19, covering all the other departments.
A total number of 1025 services are covered under Sakaala. While a total number of22,88,81,652 applications have been received, 22,82,55,866 applications have been disposed of. Mandya, Chikkamagaluru and Chikkaballapura Districts are in the first three places in implementation of ‘Sakaala,’ followed by Bengaluru City, Bidar and Raichur.
Keywords: Sakaala Week/ Suresh Kumar
Key words: Education Minister- Suresh Kumar-inaugurating –sakala saptaha