‘ಜನಸೇವಕ ಯೋಜನೆ’ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ….

ಬೆಂಗಳೂರು,ಫೆಬ್ರವರಿ,19,2021(www.justkannada.in): ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಸಚಿವ ಸುರೇಶ್ ಕುಮಾರ್ ಮತ್ತು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅಧಿಕೃತವಾಗಿ ಚಾಲನೆ ನೀಡಿದರು.jk

ನಾಗರೀಕರ ಮನೆಬಾಗಿಲಲ್ಲಿ ಅರ್ಜಿಗಳನ್ನು ಸ್ವೀಕರಿಸುವುದು ಹಾಗೂ ಸೇವೆಗಳನ್ನು ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆಯಲ್ಲಿ ಒಳಪಡುವ ಇಲಾಖೆಗಳು ಈ ಕೆಳಕಂಡಂತಿವೆ.

1} ಆಧಾರ್ ಕಾರ್ಡ್.

2} ಕಂದಾಯ ಇಲಾಖೆ 21 ಸೇವೆಗಳು (ಜಾತಿ/ ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಅಂಗವಿಕಲ/ ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇತರೆ ಯೋಜನೆಗಳು ಒಳಪಡುತ್ತವೆ.)

3} ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಸೇವೆಗಳು.

4} ಬಿಬಿಎಂಪಿ ವ್ಯಾಪ್ತಿಯ 18 ಸೇವೆಗಳು.

5} ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಗಳು.

6} ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೇವೆಗಳು.

7} ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಮುಖ  3 ಸೇವೆಗಳು.

8} ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಬಿಪಿಎಲ್ ಪಡಿತರ ಚೀಟಿ)

9} ಇ-ಸ್ಟ್ಯಾಂಪ್.

10} ಸಾರಿಗೆ ಇಲಾಖೆ ಸೇವೆಗಳು.

11} ಇನ್ನಿತರೆ ಇಲಾಖೆಯ ಸೇವೆಗಳು “ಜನಸೇವಕ ಯೋಜನೆ”ಯಲ್ಲಿ ಒಳಪಡುತ್ತವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ (080-44554455), ಜಾಲತಾಣ (www.janasevaka.karnataka.gov.in) ಹಾಗೂ ಜನಸೇವಕ ಮೊಬೈಲ್ ಆಪ್ ಮೂಲಕ ಸಂಪರ್ಕಿಸಬಹುದು.education-minister-suresh-kumar-janasevana-project-bangalore

ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗರೀಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದ್ದಾರೆ.

ENGLISH SUMMARY….

Education Minister Suresh Kumar launches Janasevaka scheme
Bengaluru, Feb. 19, 2021 (www.justkannada.in): Primary and Secondary Education, Sakala Minister Suresh Kumar, and Cooperation Minister S.T. Somashekar today officially launched the ‘Janasevaka’ scheme in Yeshwanthpur Assembly Constituency limits.
The major objective of this scheme is receiving applications at the doorstep of citizens and providing services.
The services that come under this scheme include:
1. Aadhar card
2. 21 services of the Revenue Department (Caste/ Income Certificate, Oldage pension, Physically Challenged/ Widow pension, Sandhya Suraksha Scheme, and other schemes).
3. Services of the Karnataka Building Construction workers’ and Labour Welfare Board.
4. 18 services of BBMP
5. Programs of the Physically Challenged and Senior Citizens’ Empowerment Department
6. Health and Family Welfare Department services
7. 3 services of the Karnataka State Police Department.
8. Food and Civil Supplies Department (BPL card)
9. E-stamp
10. Transport Department services
11. Other Department services
For more details, you can call 080-44554455 or visit www.janasevaka.karnataka.gov.in or install the ‘Janasevaka’ app and contact.education-minister-suresh-kumar-janasevana-project-bangalore
Citizens of the Yeshwanthpur Assembly Constituency limits can avail the benefits of this program.
Keywords: Janasevaka scheme/ Minister Suresh Kumar/ Minister S.T. Somashekar/ Yeshwanthpur

Key words: Education Minister- Suresh Kumar – Janasevana project- bangalore