ಬೆಂಗಳೂರು,ಜೂ,3,2020(www.justkannada.in): ಕೊರೋನಾ ಆರ್ಭಟದಿಂದಾಗಿ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆ ರಾಜ್ಯದಲ್ಲಿ ಬಂದ್ ಆಗಿದ್ದ ವ್ಯಾಪರ ವಹಿವಾಟು ಇದೀಗ ಲಾಕ್ ಡೌನ್ ನಿಯಮ ಸಡಿಲಗೊಂಡ ಬಳಿಕ ಪ್ರಾರಂಭವಾಗಿದೆ. ಕೊರೋನಾ ಭೀತಿ ನಡುವೆ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ಶಾಲೆ ಆರಂಭ ಕುರಿತು ಪೋಷಕರು ಮತ್ತು ಎಸ್ ಡಿಎಂಸಿ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸುವಂತೆ ಮುಖ್ಯ ಶಿಕ್ಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಪೋಷಕರ ಅಭಿಪ್ರಾಯ ಪಡೆದು ನಂತರ ಶಾಲೆ ಪ್ರಾರಂಭದ ದಿನಾಂಕ ಘೋಷಿಸಲು ಸಚಿವರು ಮುಂದಾಗಿದ್ದಾರೆ.
ಈ ಮಧ್ಯೆ ಶಾಲೆ ಆರಂಭಕ್ಕೆ ಶಿಕ್ಷಣ ಸಚಿವರು ತ್ರಿಸೂತ್ರ ಅನುಸರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮೊದಲನೇಯದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ ಆರಂಬಿಸುವುದು. ಎರಡನೇಯದ್ದು ಶಿಫ್ಟ್ ಪ್ರಕಾರ ಬೆಳಿಗ್ಗೆ ಮಧ್ಯಾಹ್ನ ಶಾಲೆ ಪ್ರಾರಂಭಿಸಿವುದು. ಮೂರನೇಯದ್ದು ವಿದ್ಯಾರ್ಥಿಗಳಿಗೆ ಅನುಗುಣವಾಗಿ ದಿನಬಿಟ್ಟು ದಿನ ಶಾಲೆ ಪ್ರಾರಂಭಿಸುವುದು. ಹೀಗೆ ತ್ರಿ ಸೂತ್ರ ನಿಯಮ ಪಾಲಿಸಲು ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Key words: Education Minister – three rules- start- school