ಮೈಸೂರು,ಸೆಪ್ಟೆಂಬರ್,26,2020(www.justkannada.in) : ಭಾರತದ ಶಿಕ್ಷಣ ನೀತಿಯಲ್ಲಿ ಹೊಸ ಪಾಲಿಸಿಗಳನ್ನ ತರುವ ಪ್ರಯತ್ನ ನಡೆಯುತ್ತಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳ ನೇತೃತ್ವದಲ್ಲಿ ಶಿಕ್ಷಣದಲ್ಲಿ ಹಲವು ಬದಲಾವಣೆಗಳನ್ನ ತರುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿ, ಮೈಸೂರು ವಿವಿ ಶೈಕ್ಷಿಕ್ ಸಂಘ, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘದ ವತಿಯಿಂದ ಶನಿವಾರ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಆಯೋಜಿಸಿರುವ ಒಂದು ದಿನದ ವಿಚಾರ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ನೀತಿಯಲ್ಲಿ ಸತ್ವವುಳ್ಳಂತಹ ವಿಚಾರಗಳು ಮುಖ್ಯ. ಇವರೆಗೆ ನಡೆದಿರುವ ಚರ್ಚೆಗಳು, ಕುಲಪತಿಗಳ ಅಭಿಪ್ರಾಯಗಳು ವಿಷಯಾಧಾರಿತವಾಗಿದ್ದು, ಹೆಚ್ಚಿನ ಮೌಲ್ಯವುಳ್ಳ ವಿಚಾರಗಳು ಶಿಕ್ಷಣ ನೀತಿಯಲ್ಲಿ ಬರಲಿದೆ ಎಂದರು.
ಶೈಕ್ಷಣಿಕ ಮಹಾ ಸಂಘ, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಮಾತನಾಡಿ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ ವಿಚಾರ ಸಂಕಿರಣ ಅಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಬದಲಾವಣೆಯ ಅವಶ್ಯವಿದೆ. ದೇಶದ ಅಭಿವೃದ್ಧಿಯಾಗಬೇಕಾದರೆ, ಶಿಕ್ಷಕನ ವ್ಯಕ್ತಿತ್ವ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಸಮಾಜಕ್ಕೆ ಒಳಿತನ್ನುಂಟು ಮಾಡುವ ರೀತಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದೊಟ್ಟಿಗೆ ಚರ್ಚೆ ನಡೆಸುತ್ತಾ ಬಂದಿದೆ.
ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ.ಬಸವರಾಜ್, ಕುಲಸಚಿವ ಆರ್.ಶಿವಪ್ಪ, ಎಂಎಲ್ಸಿಅರುಣ್ ಶಹಾಪುರ ಇನ್ನಿತರರು ಹಾಜರಿದ್ದರು.
key words : effort-bring-new-policies-education-policy-Chancellor Prof.G.Hemant Kumar