ಬೆಂಗಳೂರು,ಸೆಪ್ಟಂಬರ್,15,2023(www.justkannada.in): ಸಾಮಾಜಿಕ ನ್ಯಾಯ ಆರ್ಥಿಕ ಸಮಾನತೆಗಾಗಿ ಸಂವಿಧಾನ ರಚನೆ ಮಾಡಲಾಗಿದೆ. ಸಂವಿಧಾನದಂತೆ ನಡೆದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಸಿಎಂ ಸಿದ್ಧರಾಮಯ್ಯ ನುಡಿದರು.
ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆ ವಿಧಾನಸೌಧದ ಮೆಟ್ಟಿಲಿನ ಬಳಿ ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು.
ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಿಸುತ್ತಿದ್ದೇವೆ. ಅನೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಿಸಲಾಗುತ್ತಿದೆ. ಸಿಂಧೂ ನಾಗರಿಕತೆ ಕಾಲದಿಂದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಪ್ರಾಚೀನ ಕಾಲನಿಂದಲೂ ಭಾರತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇತ್ತು. ಬೌದ್ದರ ಕಾಲ ಬಸವಣ್ಣರ ಕಾಲದಲ್ಲೇ ಪ್ರಜಾಪ್ರಭುತ್ವ ಇತ್ತು. ಬೌದ್ಧರ ಕಾಲದಲ್ಲಿ ಸಂಘದ ಚುನಾವಣೆ ನಡೆಯುತ್ತಿತ್ತು. ಈಗ ಜಗತ್ತಿನ ಅನೇಕ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನ ಅಳವಡಿಸಿಕೊಂಡಿವೆ ಎಂದರು.
ಜನರಿಗೆ ಕೊಟ್ಟ ಭರವಸೆಯಂತೆ ನಾಲ್ಕು ಯೋಜನೆ ಜಾರಿಗಳಿಸಿದ್ದೇವೆ. ಆರ್ಥಿಕ ಸಾಮಾಜಿಕ ವಂಚಿತರಿಗೆ ಶಕ್ತಿ ತುಂಬುತ್ತಿದ್ದೇವೆ. ಹಿಂದುಳಿದವರು ಅವಕಾಶ ವಂಚಿತರ ಪರ ನಮ್ಮ ಸರ್ಕಾರವಿದೆ. ಸಂವಿಧಾನದಂತೆ ನಡೆದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಶಾಲೆಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕು. ಸಂವಿಧಾನ ವಿರೋಧಿಸುವವರ ಬಗ್ಗೆ ಜಾಗೃತರಾಗಿರಬೇಕು . ಮಕ್ಕಳು ಸೇರಿ ಎಲ್ಲರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ಧರಾಮಯ್ಯ ಕರೆ ನೀಡಿದರು.
Key words: egalitarian society – built -only – constitution-CM Siddaramaiah