ಅಪರೇಷನ್ ಕಮಲ ಕುರಿತು ಏಕನಾಥ ಸಿಂಧೆ ಹೇಳಿಕೆ: ಬಿವೈ ವಿಜಯೇಂದ್ರ, ಡಾ.ಸಿ. ಎನ್ ಅಶ್ವತ್ ನಾರಾಯಣ್ ಪ್ರತಿಕ್ರಿಯೆ ಏನು..?

ಬೆಂಗಳೂರು, ಮೇ,13,2024 (www.justkannada.in): ಕರ್ನಾಟಕದಲ್ಲಿ ಅಪರೇಷನ್ ಕಮಲ ಕುರಿತು ಮಹಾರಾಷ್ಟ್ರ ಸಿಎಂ ಏಕನಾಥ ಸಿಂಧೆ  ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ ಮತ್ತು ಶಾಸಕ ಡಾ.ಸಿಎನ್ ಅಶ್ವತ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರತು ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ನಾವು ಸರ್ಕಾರ ಬೀಳಿಸುವ ಕೆಲಸ ನಾವು ಮಾಡಲ್ಲ. ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ ಆದರೆ ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ.  ಯಾವ ರೀತಿ ಪರಿಣಾಮ ಬೀಳುತ್ತೆ ಎಂಬುದಕ್ಕೆ ನಾವು ಹೊಣೆಗಾರರಲ್ಲ. ವಿರೋಧ ಪಕ್ಷದಲ್ಲೇ ನಾವು ಜವಾಬ್ದಾರಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಒಳ ಜಗಳದಿಂದ ಸರ್ಕಾರ ಬೀಳಬೇಕೆ ಹೊರತು ನಾವು ಬೀಳಿಸಲ್ಲ- ಅಶ್ವತ್ ನಾರಾಯಣ್, ಕುರ್ಚಿಗಾಗಿ ಅವರವರೇ  ಕಚ್ಚಾಡುತ್ತಿದ್ದಾರೆ.  ವರ್ಗಾವಣೆ ದಂಧೆ ಆರೋಪ ಕೇಳಿ ಬಂದಿದೆ. ಪ್ರತಿನಿತ್ಯ ಅವರದ್ದೇ ಶಾಸಕರು ಹೇಳಿಕೆ ಕೊಟ್ಟಿದ್ದಾರೆ.  ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಅಂತ ಸಾಮಾನ್ಯವಾಗಿ ಹೇಳುತ್ತಿದ್ದಾರೆ. ಒಳ ಜಗಳದಿಂದ ಸರ್ಕಾರ ಬೀಳಬೇಕೆ ಹೊರತು ನಾವು ಬೀಳಿಸಲ್ಲ ಎಂದಿದ್ದಾರೆ.

Key words: Eknath Sinde, Statement, BY Vijayendra