ನವದೆಹಲಿ,ಮಾರ್ಚ್,18,2024(www.justkannada.in): ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡದ ಹಿನ್ನೆಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿದೆ.
ಈ ಸಂಬಂಧ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಚುನಾವಣಾ ಬಾಂಡ್ ಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು. ಮಾರ್ಚ್ 21ರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ಎಸ್ ಬಿಐಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಆಯ್ದ ಮಾಹಿತಿಯನ್ನು ಮಾತ್ರ ಏಕೆ ಸಾರ್ವಜನಿಕ ಗೊಳಿಸಲಾಗುತ್ತಿದೆ. ಎಲ್ಲಾ ಮಾಹಿತಿಗಳನ್ನು ಏಕೆ ಬಹಿರಂಗಪಡಿಸಲಾಗುತ್ತಿಲ್ಲ ಎಂದು ಎಸ್ಬಿಐಗೆ ಸುಪ್ರೀಂಕೋರ್ಟ್ ಪ್ರಶ್ನಿಸಿತು. ರಾಷ್ಟ್ರೀಯ ಪಕ್ಷಗಳೊಂದಿಗೆ ದಾನಿಗಳ ವಿವರಗಳನ್ನು ಲಿಂಕ್ ಮಾಡಲು ಸಹಾಯ ಮಾಡುವ ಆಲ್ಫಾನ್ಯೂಮರಿಕ್ ಸೀರಿಯಲ್ ಕೋಡ್ ಸೇರಿದಂತೆ ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪಂಚ ಪೀಠವು ಫೆಬ್ರವರಿ ತೀರ್ಪಿನಲ್ಲಿ ಬಾಂಡ್ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಬ್ಯಾಂಕ್ ಗೆ ಕೇಳಿತ್ತು. ತನ್ನ ಆದೇಶದಲ್ಲಿ ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರಿಗೆ ಮಾರ್ಚ್ 21ರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ್ದು, ಬ್ಯಾಂಕ್ ತನ್ನ ಸ್ವಾಧೀನದಲ್ಲಿರುವ ಚುನಾವಣಾ ಬಾಂಡ್ ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸಬೇಕು ಮತ್ತು ಯಾವುದೇ ವಿವರಗಳನ್ನು ತಡೆಹಿಡಿಯುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.
Key words: Election bond- Supreme Court – SBI