ಬೆಂಗಳೂರು,ಏಪ್ರಿಲ್,8,2023(www.justkannada.in): ರಾಜ್ಯ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಆದರೂ ನೀತಿ ಸಂಹಿತೆ ಮೀರಿ ಸಾಗಾಟ ಮಾಡುತ್ತಿದ್ದ 4.75 ಕೋಟಿ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಜಪ್ತಿ ಮಾಡಿದರು.
ನಿನ್ನೆ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಾಟ ಹಿನ್ನೆಲೆ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್ಬಿಐ ಪ್ರಕಾರ ಪ್ರೋಟೊಕಾಲ್ ಉಲ್ಲಂಘನೆ ಮಾಡಿದ್ದು, ಈ ಹಿನ್ನಲೆ ಚುನಾವಣಾ ನೀತಿ ಸಂಹಿತೆ ಪ್ರಕಾರ ಉಳಿದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿರುವ ಹೆಬ್ಬಗೋಡಿ ಪೊಲೀಸರು, ಸೀಜ್ ಆದ 4 ಕೋಟಿ ಹಣ ಠಾಣೆಯಲ್ಲಿಯೇ ಇದ್ದ ಕಾರಣ ನಿನ್ನೆ ಇಡೀ ರಾತ್ರಿ ಇನ್ಸ್ಪೆಕ್ಟರ್ ಬಿಐ ರೆಡ್ಡಿ ಠಾಣೆಯಲ್ಲಿಯೇ ಮಲಗಿದ್ದರು.
ಎಟಿಎಂ ವಾಹನಗಳ ಜತೆ ಕೋಟ್ಯಾಂತರ ಹಣ, ರೈಟರ್ಸ್ ಕಂಪನಿಯ ಮೂರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ತವಾ, ಕುಕ್ಕರ್ ಜಪ್ತಿ.
ಇನ್ನು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕುಕ್ಕರ್ ಹಾಗೂ ತವಾವನ್ನು ಜಪ್ತಿ ಮಾಡಿದ್ದಾರೆ. ಚುನಾವಣಾಧಿಕಾರಿಗಳ ದಾಳಿ ವೇಳೆ 4,533 ಕುಕ್ಕರ್, 10,964 ತವಾ ಪತ್ತೆಯಾಗಿದ್ದು, ಸುಮಾರು 1.57 ಕೋಟಿ ಮೌಲ್ಯದ ತವಾ, ಕುಕ್ಕರ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
Key words: Election -Code of Conduct- Rs 4.75 crore- Siege