ಮೈಸೂರು,ಏಪ್ರಿಲ್,09,2021(www.justkannada.in) : ಉಪಚುನಾವಣೆಗೆ ಸರ್ಕಾರಿ ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡಲಾಗುತ್ತಿದ್ದು, ಎಂಟು ಮಂತ್ರಿಗಳ ಇಲಾಖೆಗಳಿಂದ 500 ಕೋಟಿ ಹಣವನ್ನು ಸಂಗ್ರಹಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಗಂಭೀರ ಆರೋಪ ಮಾಡಿದ್ದಾರೆ.ಅಬಕಾರಿ ಅಧಿಕಾರಿಗಳಿಂದ 50 ಲಕ್ಷ, 1 ಕೋಟಿಯವರೆಗೂ ಹಣ ಪಡೆಯಲಾಗುತ್ತಿದೆ. ಈ ವಿಷಯವನ್ನ ನನ್ನ ಆತ್ಮೀಯ ಅಬಕಾರಿ ಡಿಸಿ ಒಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆ ಹಣವನ್ನು ಉಪಚುನಾವಣೆಗೆ ಬಳಸಲಾಗುತ್ತಿದೆ. ಆ ಹಣವನ್ನು ಸರ್ಕಾರಿ ವಾಹನಗಳಲ್ಲೇ ಸಾಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಇದರ ಕುರಿತು ಕ್ರಮ ಕೈಗೊಳ್ಳದಿದ್ದರೆ ಜನರು ಚುನಾವಣಾ ಆಯೋಗದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : election-Government-authorities-Hafta-Vasuli-KPCC-spokesman-M.Laxman-Serious-Accused