ಮೈಸೂರು, ಡಿಸೆಂಬರ್,23,2024 (www.justkannada.in): ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ (33) ವರ್ಷ ಮೃತಪಟ್ಟ ವ್ಯಕ್ತಿ. ತಡರಾತ್ರಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವೇಳೆ ಪತ್ನಿ ಕಾವ್ಯ ಹಾಗೂ ತಾಯಿ ನಾಗಮ್ಮಗೆ ವಿದ್ಯುತ್ ಸ್ಪರ್ಶಿಸಿದ್ದು, ಈ ಸಮಯದಲ್ಲಿ ಲೋಕೇಶ್ ತನ್ನ ಪತ್ನಿ ತಾಯಿ ರಕ್ಷಣೆಗೆ ಮುಂದಾಗಿದ್ದರು. ಆದರೆ ವಿದ್ಯುತ್ ಶಾಕ್ ನಿಂದ ಲೋಕೇಶ್ ಅವರೇ ಮೃತಪಟ್ಟಿದ್ದಾರೆ.
ಲೋಕೇಶ್ ಪತ್ನಿ ಕಾವ್ಯ ಹಾಗೂ ತಾಯಿ ನಾಗಮ್ಮಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚೆಸ್ಕಾಂ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Electrical shock, Man, dies, Mysore