ಬೆಂಗಳೂರು,ಅಕ್ಟೋಬರ್,1,2022(www.justkannada.in): ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ ಯೂನಿಟ್ ಗೆ 43 ಪೈಸೆ ಹೆಚ್ಚಳವಾಗಲಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಈ ನಡುವೆ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರವನ್ನ ಮುಂದಿನ ವರ್ಷ ಏಪ್ರಿಲ್ ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ.
ಈ ಹಿಂದೆಯೂ ಎರಡು ಬಾರಿ ವಿದ್ಯುತ್ ದರ ಏರಿಸಲಾಗಿದೆ, ಈಗ ಮತ್ತೆ ದರ ಏರಿಕೆ ಮಾಡುತ್ತಿರುವುದು ಬಹುದೊಡ್ಡ ಅನ್ಯಾಯ. ದರ ಏರಿಕೆಯಿಂದ ಶೇ.10 ರಷ್ಟು ವಿದ್ಯುತ್ ಬಿಲ್ ಹೆಚ್ಚಾಗುತ್ತೆ. ಜೊತೆಗೆ ಶೇ. 9 ರಷ್ಟ ತೆರಿಗೆ ಹಾಕಲಾಗಿದೆ . ಇದು ಸರಿಯಲ್ಲ. ಸರ್ಕಾರದ ಶೇ.9ರಷ್ಟಿರುವ ತೆರಿಗೆಯನ್ನ ಶೇ 4ಕ್ಕೆ ಇಳಿಸಬೇಕು. ಇಂದಿನಿಂದ ಜಾರಿಯಾದ ಹೊಸ ದರ ಏರಿಕೆಯನ್ನ ಮುಂದಿನ ಏಪ್ರಿಲ್ ವರೆಗೂ ತಡೆಹಿಡಿಯಿರಿ ಎಂದು ಹೋಟೆಲ್ ಮಾಲೀಕರ ಸಂಘ ಒತ್ತಾಯಿಸಿದೆ.
Key words: Electricity- price- hike-Opposition – Hotel Owners Association