ರಾಜ್ಯದ ಜನರಿಗೆ ಸದ್ಯದಲ್ಲೆ ವಿದ್ಯುತ್ ದರ ಏರಿಕೆಯ ಶಾಕ್?

ಬೆಂಗಳೂರು,ಡಿಸೆಂಬರ್,6,2024 (www.justkannada.in): ಈಗಾಗಲೇ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ  ರಾಜ್ಯದ ಜನರಿಗೆ  ಸದ್ಯದಲ್ಲೇ ವಿದ್ಯುತ್ ದರ ಏರಿಕೆಯ ಶಾಕ್ ತಟ್ಟುವ ಸಾಧ್ಯತೆ ಇದೆ.

ಹೌದು, ವಿದ್ಯುತ್ ದರ ಏರಿಕೆ ಮಾಡುವಂತೆ  ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಈಗಾಗಲೇ ರಾಜ್ಯದ ಎಲ್ಲ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ. ಮೂರು ವರ್ಷಗಳಿಗೆ ಅನುಗುಣವಾಗುವಂತೆ  ಪ್ರತಿ ಯುನಿಟ್ ದರ ಹೆಚ್ಚಳ ಮಾಡಲು  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಮನವಿ ಸಲ್ಲಿಸಿವೆ ಎನ್ನಲಾಗಿದೆ.

2025-26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ,  2026-27 ರಲ್ಲಿ ಪ್ರತಿ ಯೂನಿಟ್​ ಗೆ 75 ಪೈಸೆ ಹಾಗೂ 2027-28 ರಲ್ಲಿ 91 ಪೈಸೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆಯಲ್ಲಿ ತಿಳಿಸಿವೆ.  ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿತ್ತು.

ಈ ಸಂಬಂಧ 2025 ಫೆಬ್ರವರಿಯಲ್ಲಿ  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಲಿದ್ದು, ಅಹವಾಲು ಸ್ವೀಕಾರ ಮಾಡಲಿದೆ. ಬಳಿಕ ಸಾಧಕ ಸಾಧಕ ಗಳ ಪರಿಶೀಲಿಸಿ, ಪರ ವಿರೋಧಗಳ ಚರ್ಚೆ ಆಲಿಸಲಿದೆ.  ನಂತರ ಮಾರ್ಚ್ ತಿಂಗಳಲ್ಲಿ ‌ದರ ಏರಿಕೆ ಬಗ್ಗೆ ನಿರ್ಧಾರ ಮಾಡಲಿದೆ ಎನ್ನಲಾಗಿದೆ.

Key words: electricity, price, hike, KSRC