‘ ಸೋಷಿಯಲ್ ಮೀಡಿಯಾ’ ಗಳಿಂದ ‘ ಮಾಧ್ಯಮ ಭಯೋತ್ಪಾಧಕರಿಗೆ’ ತಪರಾಕಿ…!

 

ಮೈಸೂರು, ಜ.25, 2020 : (www.justkannada.in news ) : ಸಮಾಜದ ನಾಲ್ಕನೆ ಅಂಗ ಮಾಧ್ಯಮ. ಆರಂಭದಲ್ಲಿ ಕೇವಲ ಮುದ್ರಣ ಮಾಧ್ಯಮ ಮಾತ್ರ ಈ ಕಾರ್ಯ ನಿರ್ವಹಿಸುತ್ತಿತ್ತು. ಆನಂತರ ನಿಧಾನವಾಗಿ ವಿದ್ಯುನ್ಮಾನ ಮಾಧ್ಯಮ ಪ್ರವೇಶಿಸಿ ಮುದ್ರಣ ಮಾಧ್ಯಮಗಳ ಮೇಲೆ ಪ್ರಭಾವ ಬೀರಲು ಆರಂಭಿಸಿತು. ಇದೀಗ ಸೋಷಿಯಲ್ ಮೀಡಿಯಾಗಳು ಶರವೇಗದಲ್ಲಿ ಮಾಧ್ಯಮ ಕ್ಷೇತ್ರವನ್ನು ಆವರಿಸಿಕೊಂಡಿವೆ. ಎಡ-ಬಲ ಎನ್ನದೆ ನೇರ, ನಿರಂತರವಾಗಿ ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರಲಾರಂಭಿಸಿವೆ.

ಯಾವ ಮುದ್ರಣ ಮಾಧ್ಯಮಗಳಿಗೆ ಸುದ್ಧಿಗೆ ಡೈರಕ್ಷನ್ ಅನ್ನು ನಿರ್ದೇಶಿಸುತ್ತಿದ್ದವೋ ಅಮೂಲಕ ಪರೋಕ್ಷವಾಗಿ ವಿವ್ಸ್ ನಿಯಂತ್ರಿಸುತ್ತಿದ್ದವೋ ಅಂಥ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈಗ ಸೆಡ್ಡು ಹೊಡೆಯುವ ಮಟ್ಟಕ್ಕೆ ಸೋಷಿಯಲ್ ಮೀಡಿಯಾಗಳು ಪ್ರಭಾವಿಯಾಗಿವೆ.

ಆಡಳಿತಾರೂಢ ಸರಕಾರಕ್ಕೆ ವಿಪಕ್ಷಗಳ ಟೀಕೆ, ಟಿಪ್ಪಣಿಗಿಂತ ಸೋಷಿಯಲ್ ಮೀಡಿಯಾಗಳ ವ್ಯಂಗಾಸ್ತ್ರವೇ ಹೆಚ್ಚು ಪವರ್ ಫುಲ್ ಆಗಿದೆ. ಒಂದು ಕಾಲದಲ್ಲಿ ಇದೇ ಸೋಷಿಯಲ್ ಮೀಡಿಯಾಗಳ ಸಹಾಯದಿಂದ ಅಧಿಕಾರಕ್ಕೆ ಬಂದವರಿಗೂ ಈಗ ಸಾಮಾಜಿಕ ಜಾಲತಾಣ ಬಿಸಿತುಪ್ಪವಾಗಿದೆ. ಕಾರಣ, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ `ಬುಲ್ ಡಾಗ್ ‘ ಹೊಣೆಗಾರಿಕೆಯನ್ನು ಈ ಸೋಷಿಯಲ್ ಮೀಡಿಯಾಗಳೇ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು.

electronic-media-social.media-tv-politics-karnataka-journalist-media.terrorists

ಪರಿಸ್ಥಿತಿ ಹೇಗಿದೆ ಅಂದ್ರೆ, ಸೋಷಿಯಲ್ ಮೀಡಿಯಾಗಳ ಬೈಗುಳ, ಟ್ರಾಲ್ ಗಳಿಂದ ತಪ್ಪಿಸಿಕೊಳ್ಳಲು ಎಲೆಕ್ಟ್ರಾನಿಕ್ ಮೀಡಿಯಾಗಳು ಹೆಣಗಾಡುವಂತಾಗಿದೆ. ಯಾವುದಾದರೊಂದು ಸುದ್ಧಿ ಬ್ರೇಕ್ ಆದ ಕೂಡಲೇ, ಎಕ್ಸ್ ಕ್ಲೂಸಿವ್ ಚಟಕ್ಕೆ ಬಿದ್ದಿರುವ ಟಿವಿಗಳು, ‘ ನಮ್ಮಲ್ಲೇ ಮೊದಲು ‘ ಎಂದೇಳುವ ಸಲುವಾಗಿ ಕಪೋಲಾ ಕಲ್ಪಿತ ವರದಿಗಳನ್ನು ಹರಿಬಿಟ್ಟು ನಂತರ ನೆಟ್ಟಿಗರ ತಪರಾಕಿಗೆ ಈಡಾಗಿದ್ದು ವಿಪರ್ಯಾಸ.

ಲೇಟೆಸ್ಟ್ ನಿದರ್ಶನ :

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಟಿವಿ ಮಾಧ್ಯಮಗಳು ಹಾಗೂ ಕೆಲ ಮುದ್ರಣ ಮಾಧ್ಯಮಗಳು ಸೋಷಿಯಲ್ ಮೀಡಿಯಾ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

electronic-media-social.media-tv-politics-karnataka-journalist-media.terrorists
ಸುದ್ದಿ ತಿಳಿದ ಮೊದಲ ದಿನ, ಮೀಡಿಯಾಗಳು ಹೇಳಿದ್ದು ಶಕ್ತಿಶಾಲಿ ಬಾಂಬ್. RDX ಇತ್ತು, ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಡ್ಯಾಮೇಜ್ ಮಾಡ್ತಾ ಇತ್ತು ಎಂದು ಬಡಬಡಾಯಿಸಿದ್ದವು. ಆದರೆ ಮರುದಿನ ಆರೋಪಿ ಗುರುತು ಪತ್ತೆಯಾದ ಬಳಿಕ, ಅದು ಕಚ್ಚಾ ಬಾಂಬ್! RDX ಅಮೋನಿಯಂ ನೈಟ್ರೇಟ್ ಡಿಟೋನೇಟರ್ ಟೈಮರ್ ಯಾವುದೂ ಇರಲಿಲ್ಲ ಎಂದು ವರಸೆ ಬದಲಾಯಿಸಿದವು. ಬಹುಶಃ, ಟಿವಿಯವ್ರು ಎಣಿಸಿದ್ದ ಆರೋಪಿ ಬೇರೆಯವ್ರೇ ಇದ್ರೇನೋ. ಆದರೆ ಸಿಕ್ಕಿ ಬಿದ್ದದ್ದು ಮಾತ್ರ ಇನ್ಯಾರೋ..ಆದ್ದರಿಂದಲೇ ನಿಮ್ ವರ್ತನೆಲಿ ಬದಲಾವಣೆ ಆಯ್ತ..? ಎಂದು ಕೆಲವರು ಝಾಡಿಸಿದರೆ, ಮತ್ತೆ ಕೆಲವರು, ಆರೋಪಿಯ ಮಾಹಿತಿ ಬಹಿರಂಗವಾದ ನಂತರ, ಟಿವಿಯವರು ಹೇಳ್ತಾ ಇರೋದು ನಿಜವಾಗಿದ್ರೆ, ಈ ಮೊದಲು ಘಟನೆಗೆ ಸಂಬಂಧಿಸಿದಂತೆ ಕಪೋಲಕಲ್ಪಿತ ಸುಳ್ಳು ಹೇಳಿ ಜನರನ್ನು ಭೀತಿಗೊಳಿಸಿದ್ದು ಯಾಕೆ? ನಿಮ್ಮನ್ನು ಯಾಕೆ ಮಾಧ್ಯಮ ಭಯೋತ್ಪಾಧಕರು ಎನ್ನಬಾರದು..? ಹೀಗೆ ಅನೇಕ ಪ್ರಶ್ನೆಗಳ ಮೂಲಕ ಸಖತ್ತಾಗೇ ಕಾಲೆಳೆಯುತ್ತಿದ್ದಾರೆ.

key words : electronic-media-social.media-tv-politics-karnataka-journalist-media.terrorists