ಬೆಂಗಳೂರು,ಡಿಸೆಂಬರ್,24,2020(www.justkannada.in): ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ 8, 9 ಮತ್ತು 10ನೇ ತರತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ 1,000 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಗುರುವಾರ ವಿತರಿಸಿದರು.
ಕೋವಿಡ್ ಕಾರಣದಿಂದ ಎಲ್ಲೆಡೆ ಡಿಜಿಟಲ್ ಕಲಿಕೆ ಅನಿವಾರ್ಯವಾಗಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಬೋಧನೆ ಮತ್ತು ಕಲಿಕೆಯಲ್ಲಿ ಸರಕಾರಿ ಶಾಲೆಗಳ ಮಕ್ಕಳು ಹಿಂದೆ ಬಿದ್ದಿದ್ದಾರೆಂಬ ಮಾತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತವಾಗುವ ಅಪಾಯವೂ ಎದುರಾಗಿತ್ತು. ಇದನ್ನು ಗಮನಿಸಿದ ಡಿಸಿಎಂ ಅಶ್ವಥ್ ನಾರಾಯಣ್, ಮಲ್ಲೇಶ್ವರಂ ಕ್ಷೇತ್ರದಲ್ಲಿರುವ ಏಳು ಪ್ರೌಢಶಾಲೆಗಳೂ ಸೇರಿ ಒಟ್ಟು 21 ಸರಕಾರಿಗಳ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ತರಿಸಿಕೊಂಡು, ʼಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ʼ, ʼಆರ್.ವಿ.ಶಿಕ್ಷಣ ತರಬೇತಿ ಸಂಸ್ಥೆ ಮತ್ತುಶಿಕ್ಷಣ ಫೌಂಡೇಷನ್ʼ ನೆರವಿನೊಂದಿಗೆ ಎಲ್ಲ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಒಟ್ಟು 1,000 ಉತ್ಕೃಷ್ಟ ಗುಣಮಟ್ಟದ ಟ್ಯಾಬ್‌ಗಳನ್ನು ನೀಡಿದರು.
ಡಿಜಿಟಲ್ ಅಂತರ ನಿವಾರಣೆ:
ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ನಡುವೆ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಟ್ಯಾಬ್‌ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ಮೂಲಕ ಡಿಜಿಟಲ್ ಮತ್ತು ಸ್ಮಾರ್ಟ್ ಕಲಿಕೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ನಾವು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಕ್ಷೇತ್ರದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದ ಅವರು, ಈ ಟ್ಯಾಬ್‌ಗಳಿಂದ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಯಾಗಲಿದೆ ಎಂದರು.
ಈ ಟ್ಯಾಬ್ ಗಳ ಉಪಯೋಗವೇನು?:
* ಉತ್ತಮ ಗುಣಮಟ್ಟದ ಈ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ ಇರಲಿದೆ. ಅದರಲ್ಲಿ ಫೊಟೋಗಳು, ವಿಡಿಯೋಗಳು ಸೇರಿದಂತೆ ಸಮಕಾಲೀನ ಸಂದರ್ಭದಲ್ಲಿ ಕಲಿಯಬೇಕಾದ ಎಲ್ಲ ರೀತಿಯ ಅಂಶಗಳನ್ನೂ ಮೊದಲೇ ಲೋಡ್ ಮಾಡಲಾಗಿರುತ್ತದೆ.
* ಶಿಕ್ಷಣ ಪೌಂಡೇಶನ್ ಅವರ ಸಹಯೋಗದೊಂದಿಗೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನು ಟ್ಯಾಬ್‌ಗಳಲ್ಲಿ ತುಂಬಲಾಗಿದೆ. ಅದರಲ್ಲಿ ವೀಡಿಯೋಗಳು ಮತ್ತು ಚಟುವಟಿಕೆಗಳೂ ಸೇರಿವೆ.
* ಆಫ್‌ಲೈನ್‌ನಲ್ಲಿ ಇದ್ದಾಗಲೂ ವಿದ್ಯಾರ್ಥಿಗಳು ಟ್ಯಾಬ್‌ಗಳ ಮೂಲಕ ಕಲಿಕೆಯನ್ನು ಮುಂದುವರಿಸಬಹುದು. ತಂತ್ರಜ್ಞಾನದ ಮೂಲಕ ಕಲಿಕೆ ಮತ್ತು ಗ್ರಹಿಕೆ ಪರಿಣಾಮಕಾರಿಯಾಗಿರುತ್ತದೆ. ಈ ಮೂಲಕ ಮಕ್ಕಳ ಕಲಿಕೆಯ ಆಸಕ್ತಿ ಇಮ್ಮಿಡಿಗೊಳ್ಳುತ್ತದೆ. ಸಂವಹನ, ಸಹಯೋಗ, ಸೃಜನಾತ್ಮಕತೆ ಹಾಗೂ ತಾರ್ಕಿಕ ಚಿಂತನೆಗಳತ್ತ ಮಕ್ಕಳು ಹೆಚ್ಚು ಪರಿಣಾಮಕಾರಿಯಾಗಿ ತೆರೆದುಕೊಳ್ಳುತ್ತಾರೆ.
* ಮಕ್ಕಳು ಮನೆಯಲ್ಲಿದ್ದಾಗಲೂ ಕಲಿಯಬಹುದು. ಜತೆಗೆ ಆಯಾ ಮಕ್ಕಳನ್ನು ಶಿಕ್ಷಕರು ಪ್ರತ್ಯೇಕವಾಗಿ ಗಮನವಿಟ್ಟು ನೋಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹುದು. ನಿತ್ಯವೂ ತಂತ್ರಜ್ಞಾನದ ಮೂಲಕ ಕಲಿಕೆ ಸಾಗುವುದರಿಂದ ಮಕ್ಕಳಲ್ಲಿ ಹೊಸ ಕಲಿಕೆಯ ಅನ್ವೇಷಣೆಯತ್ತ ಆಸಕ್ತಿ ಉಂಟಾಗುತ್ತದೆ.
ಶಿಕ್ಷಕರಿಗೂ ತರಬೇತಿ:
ಡಿಜಿಟಲ್ ಮತ್ತು ಸ್ಮಾರ್ಟ್ ಶಿಕ್ಷಣಕ್ಕೆ ಶಿಕ್ಷಕರೂ ಹೊಂದಿಕೊಳ್ಳುವಂತೆ ಮಾಡಲು ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಂದ ಹೋಮ್ ವರ್ಕ್ ಮಾಡಿಸುವುದು, ಟೆಸ್ಟ್, ಪರೀಕ್ಷೆ ನಡೆಸುವುದು, ಮಕ್ಕಳ ಓದು ಸೇರಿ ಎಲ್ಲ ಅಂಶಗಳನ್ನು ಸೂಕ್ತವಾದ ರೀತಿಯಲ್ಲಿ ಟ್ರ್ಯಾಕ್ ಮಾಡಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳಿದರು.
ಆರ್‌ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಉದ್ಘಾಟನಾ ಭಾಷಣ ಮಾಡಿ, ಈ ಟ್ಯಾಬ್‌ಗಳ ಮೂಲಕ ಮಕ್ಕಳ ಕಲಿಕೆ ಇನ್ನಷ್ಟು ಉತ್ತಮವಾಗಲಿ ಎಂದು ಹಾರೈಸಿದರು.
ರಾಜ್ಯ ಸರಕಾರದ ಸ್ಟಾರ್‌ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಹಾಗೂ ಶಿಕ್ಷಣ ಫೌಂಡೇಶನ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ, ಬೆಂಗಳೂರು ಉತ್ತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾರಾಯಣ್, ಬಿಇಒ ಉಮಾದೇವಿ, ಬಿಬಿಎಂಪಿ ಮಾಜಿ ಸದಸ್ಯ ಜಯಪಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
English summary….
DCM Ashwathnarayan stresses on good learning and teaching
Bengaluru, Dec. 24, 2020 (www.justkannada.in): Deputy Chief Minister and Higher Education Minister Dr. C.N. Ashwathnarayan distributed free tabs to 1,000 students who are studying in 8th, 9th and 10th standards in Malleswaram Assembly Constituency today.
In his address to the students, he said that digital learning has become inevitable due to the Corona pandemic. “I also noticed that students learning in government schools are behind in terms of learning, compared to their contemporaries who are studying in private schools. Due to the financial crunch, especially after the Corona pandemic, many students from financially poor-families were on the verge of quitting schools. Hence, I thought of helping as much as I can.” Dr. C.N. Ashwathanarayan collected information of all the 21 government schools, including seven high schools in Malleswaram Assembly Constituency, and provided 1,000 good quality tabs to the students along with the support of R.V. Education Training Institute and Education Foundation.
Keywords: DCM Dr. C.N. Ashwathnarayan/ 1,000 tabs/ Malleswaram Assembly Constituency
Key words: Emphasis -good learning-teaching-DCM -Ashwath Narayan- distributes -1,000 -free tabs -students