ಬೆಂಗಳೂರು, ಮಾರ್ಚ್ 06, 2022 (www.justkannada.in): ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ.
ಹೌದು. ದೊಡ್ಡ ಕಟ್ಟಡಗಳ ಸುತ್ತ ಶೇಕಡ 10ರಷ್ಟು ಗಿಡ ಮರ ಬೆಳೆಸುವುದು ಕಡ್ಡಾಯಗೊಳಿಸಲಾಗಿದೆ. ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗಲಿರುವ ಹೊಸ ಲೇಔಟ್ ಗಳಲ್ಲಿ ಗಿಡಮರಗಳನ್ನು ಬೆಳೆಸಬೇಕಿದೆ.
‘ಕಟ್ಟಡ ನಿರ್ಮಾಣ ಪರಿಸರ ನಿರ್ವಹಣೆ ನಿಯಂತ್ರಣ -2022’ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಕೇಳಲಾಗಿದೆ.
5 ಸಾವಿರ ಚ.ಮೀ.ಗಿಂತಲೂ ಹೆಚ್ಚಿನ ವಿಸ್ತೀರ್ಣದ ಹೊಸ ಕಟ್ಟಡ ಯೋಜನೆ, ಬಡಾವಣೆಗಳ ನಿರ್ಮಾಣ, ಹಳೆ ಕಟ್ಟಡಗಳ ನವೀಕರಣದ ಸಂದರ್ಭದಲ್ಲಿ ಪ್ರತಿ 80 ಚ.ಮೀ. ಒಂದು ಮರ ಇರಬೇಕು.
ಇಡೀ ಕಟ್ಟಡ ಪ್ರದೇಶದಲ್ಲಿ ಶೇಕಡ 10 ರಷ್ಟು ಹಸಿರು ವಲಯ ಇರಬೇಕು. ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ವ್ಯವಸ್ಥೆ ಅಳವಡಿಸುವಂತೆ ತಿಳಿಸಲಾಗಿದೆ.