ಮೈಸೂರು,ಡಿಸೆಂಬರ್,10,2021(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಕೌಶಲ್ಯ ಹಾಗೂ ಕ್ರಿಯಾತ್ಮಕತೆಯನ್ನು ಆಧರಿಸಿ ಪಠ್ಯಕ್ರಮ ರಚನೆ ಮಾಡಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮಾಜಶಾಸ್ತ್ರ ಅಧ್ಯಾಪಕರ ಸಂಘ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗ ಹಾಗೂ ಗಂಗೋತ್ರಿಯ ಸ್ನಾತಕೋತ್ತರ ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ: ಸಮಾಜಶಾಸ್ತ್ರ ಸ್ನಾತಕ ಪದವಿ ಪಠ್ಯಕ್ರಮ ಕುರಿತು ನಡೆದ ಒಂದು ದಿನದ ಆನ್ ಲೈನ್ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಮಾಜಶಾಸ್ತ್ರ ವಿಭಾಗಕ್ಕೆ 70 ವರ್ಷದ ಇತಿಹಾಸ ಇದೆ. ಸಿ. ಪಾರ್ವತಮ್ಮ ಅವರ ಅಧ್ಯಕ್ಷತೆಯಲ್ಲಿ ಈ ವಿಭಾಗ ಆರಂಭವಾಯಿತು. ಇಲ್ಲಿಯವರೆಗೆ 23 ಸಂಶೋಧನಾ ಪ್ರಾಜೆಕ್ಟ್, 115 ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ.ಬೌದ್ಧಿಕ ವಿಚಾರ ವೇದಿಕೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ವಿಭಾಗದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ದೇಶದ ಶೇ.30 ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೊರ ದೇಶಕ್ಕೆ ಹೋಗುತ್ತಿದ್ದಾರೆ. ಅಲ್ಲದೆ, ಜಗತ್ತಿನ 100 ಅತ್ಯುತ್ತಮ ವಿವಿಗಳ ವಿಭಾಗದಲ್ಲಿ ಭಾರತದ ಒಂದು ವಿವಿ ಕೂಡ ಸ್ಥಾನ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಉನ್ನತ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದರಿಂದ 10 ವರ್ಷದ ನಂತರ ಭಾರತದ ಕನಿಷ್ಠ 10 ವಿವಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ದೇಶದಲ್ಲಿ 982 ವಿವಿಗಳಿವೆ, 53 ಸಾವಿರ ಕಾಲೇಜುಗಳಿವೆ. 3.8 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅರಿವು ಮೂಡಿಸಬೇಕಿದೆ. ಸದ್ಯ ಸ್ನಾತಕ ಪದವಿಯ ಮೊದಲೆರಡು ಸೆಮಿಸ್ಟರ್ ಪಠ್ಯಕ್ರಮ ರಚನೆ ಆಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.40 ರಷ್ಟು ಮಂದಿ ಯುವಜನತೆ ಇದೆ. ಹಾಗಾಗಿ ಇಡೀ ಪ್ರಪಂಚ ನಮ್ಮನ್ನು ನೋಡುತ್ತಿದೆ. ಶಿಕ್ಷಣಕ್ಕೆ ಸದ್ಯ 1.5 ಜಿಡಿಪಿ ಖರ್ಚು ಮಾಡಲಾಗುತ್ತಿದೆ. ಇದು ಶೇ.6 ರಷ್ಟು ಆಗಬೇಕು ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ರಾಮೇಗೌಡ ಮಾತನಾಡಿ, ಏಕರೂಪದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕೆಂಬ ಆಶಯದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗಿದೆ. ಪಠ್ಯ ಕ್ರಮರಚನೆ ಮಾಡುವಾಗ ಹಳೆಯ ಎಲ್ಲಾ ವಿಚಾರಗಳನ್ನು ತೆಗೆದು ಹಾಕದೆ ಹೊಸ ವಿಚಾರ ಅಳವಡಿಸಬೇಕಿದೆ. ಉದ್ಯೋಗಕ್ಕೆ ಸಹಕಾರಿಯಾಗುವ ಜೊತೆಗೆ ಕೌಶಲ್ಯ, ಸೃಜನಶೀಲತೆ ಅಳವಡಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಮಾನಸ ಗಂಗೋತ್ರಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಯಶೋಧಾ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಟಿ.ವಿಜಯ್, ಸಹ ಪ್ರಾಧ್ಯಾಪಕರಾದ ರೇಖಾ ಜಾಧವ್ ಸೇರಿದಂತೆ ಇತರರು ಇದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸೌಮ್ಯ ಕುಮಾರ್, ಡಾ.ಜಿ.ಡಿ.ನಾರಾಯಣ್, ಡಾ.ದೊರೆಸ್ವಾಮಿ ಭಾಗವಹಿಸಿದ್ದರು.
key words: Emphasis – skill-based -curriculum-mysore university-Prof.G.Hemanth Kumar
ENGLISH SUMMARY….
Priority for skill-based curriculum: UoM VC
Mysuru, December 10, 2021 (www.justkannada.in): “Skill and creativity based curriculum is being prepared as per the National Education Policy,” opined Prof. G. Hemanth Kumar, Vice-Chancellor, University of Mysore.
He participated in an online workshop on the topic, “National Education Policy: Sociology PG Curriculum,” organized by the Sociology Lecturers’ Association, Department of Sociology, Maharani Women’s Arts College, and the PG Department of Manasagangotri, held at the Vignana Bhavana.
In his address, he informed that the Sociology Department has a history of 70 years, and it commenced under the leadership of C. Parvathamma. “About 115 students have taken Ph.D.’s in 23 research projects till now,” he said.
Dr. Yashoda, HoD, Department of Sociology, Manasagangotri, Dr. B.T. Vijay, Principal, Maharani Women’s Arts College, Rekha Jadhav, Co-Lecturer, and others participated in the webinar. Resource persons Dr. Sowmya Kumar, Dr. G.D. Narayan, Dr. Doreswamy were also present.
Keywords: Webinar/ Sociology/ Manasagangotri/ University of Mysore