ಮೈಸೂರು,ಮೇ,31,2019(www.justkannada.in): ಮದುವೆ ಮನೆಯ ತ್ಯಾಜ್ಯ ಉತ್ಪಾದನೆಗೆ ಬ್ರೇಕ್ ಹಾಕಲು ಮೈಸೂರು ಮಹಾ ನಗರ ಪಾಲಿಕೆ ಜಾರಿಗೆ ತಂದಿರುವ ಗ್ರೀನ್ ವೆಡ್ಡಿಂಗ್ ಯೋಜನೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದ್ದು, ನಗರದಲ್ಲಿ ಇದುವರೆಗೆ 8 ಗ್ರೀನ್ ವೆಡ್ಡಿಂಗ್ ನಡೆದಿದೆ.
ಮದುವೆ ಮನೆಯಲ್ಲಿ ಉತ್ಪಾದನೆಯಾಗುತ್ತಿದ್ದ ಟನ್ ಗಟ್ಟಲೆ ಕಸದ ರಾಶಿಗೆ ಬ್ರೇಕ್ ಹಾಕಲು ನಗರ ಪಾಲಿಕೆ ಕಳೆದ ಒಂದೂವರೆ ತಿಂಗಳ ಹಿಂದೆ ಗ್ರೀನ್ ವೆಡ್ಡಿಂಗ್ ಯೋಜನೆ ರೂಪಿಸಿದೆ. ಈ ಯೋಜನೆಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಮೈಸೂರು ಮಹಾನಗರ ಪಾಲಿಕೆಯ ಪ್ರೋತ್ಸಾಹದೊಂದಿಗೆ ಈಗಾಗಲೇ 8 ಗ್ರೀನ್ ವೆಡ್ಡಿಂಗ್ ಯಶಸ್ವಿಯಾಗಿ ನಡೆದಿವೆ.
ಪ್ಲಾಸ್ಟಿಕ್ ತ್ಯಜಿಸಿ, ಊಟಕ್ಕೆ ತಟ್ಟೆ ಲೋಟ, ಕುಡಿಯುವ ನೀರಿಗೆ ಸ್ಟೀಲ್ ಗ್ಲಾಸ್ ಬಳಕೆ ಮಾಡುವಂತೆ ಮೈಸೂರು ಮಹಾನಗರ ಪಾಲಿಕೆ ಜನರಲ್ಲಿ ಮನವಿ ಮಾಡಿತ್ತು. ಮನವಿಯಿಂದ ಸ್ಫೂರ್ತಿಗೊಂಡು 8 ಗ್ರೀನ್ ವೆಡ್ಟಿಂಗ್ ನಡೆದಿದೆ.
ಈ ಬಗ್ಗೆ ಮಾತನಾಡಿರುವ ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗುತ್ತದೆ. ಪ್ಲಾಸ್ಟಿಕ್ ಮುಕ್ತ ವಿವಾಹಕ್ಕೆ ಒತ್ತು ನೀಡುವ ಸಲುವಾಗಿ, ಇಂತಹ ಗ್ರೀನ್ ವೆಡ್ಡಿಂಗ್ ವಿವಾಹ ಆಯೋಜಿಸಲು ಪ್ರೋತ್ಸಾಹ ನೀಡುತ್ತಿದೆ. ಈಗ ನಡೆದಿರುವ 8 ಮದುವೆಗೂ ನಗರ ಪಾಲಿಕೆಯಿಂದ ಪ್ರೋತ್ಸಾಹ ನೀಡುವುದರ ಜೊತೆಗೆ ಸರ್ಟಿಫಿಕೇಟ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ 100 ಗ್ರೀನ್ ವೆಡ್ಡಿಂಗ್ ಮಾಡಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ನಗರ ಭಾಗದ ಜನ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
Key words: Emphasize plastic-free wedding: Increased interest in the Green Wedding Concept.
#mysore #citycorporation #GreenWedding #Concept.