ಮೈಸೂರು,ಮೇ,30,2019(www.justkannada.in): ಕೆಎಸ್ ಒಯು ಕುಲಪತಿಗಳಾಗಿ ನೇಮಕಗೊಂಡಿದ್ದು ಸಂತೋಷವಾಗಿದೆ. ಒಳ್ಳೆಯ ಕೆಲಸ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ಅದನ್ನ ಬಳಿಸಿಕೊಂಡು ಕ್ವಾಲಿಟಿ ಎಜುಕೇಷನ್ ನೀಡಲು ಒತ್ತು ಕೊಡುತ್ತೇನೆ ಎಂದು ನೂತನ ಕುಲಪತಿ ಡಾ. ಎಸ್ ವಿದ್ಯಾಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ನೂತನ ಕುಲಪತಿಯಾಗಿ ಇಂದು ಡಾ ವಿದ್ಯಾಶಂಕರ್ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಮೂರು ವರ್ಷದಲ್ಲಿ ಏನೆಲ್ಲಾ ಒಳ್ಳೆ ಕೆಲಸ ಮಾಡಬೇಕು ಅವೆಲ್ಲವನ್ನು ಮಾಡುತ್ತೇನೆ. ಕೆಎಸ್ ಒಯುನಲ್ಲಿ ಇರುವ ಸಮಸ್ಯೆ ಏನು ಎಂದು ತಿಳಯಬೇಕಿದೆ. ನಂತರ ಅವುಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಟೆಕ್ನಿಕಲ್ ಆಗಿ ಹಾಗೂ ಉದ್ಯೋಗ ಸೃಷ್ಟಿಸುವ ಯೋಜನೆಗಳಿದ್ರೆ ಅವೆಲ್ಲಾ ಬೋರ್ಡ್ ನ ಸಹಕಾರ ಪಡೆದು ಮಾಡಲು ಪ್ರಯತ್ನಿಸುತ್ತೇನೆ. ವಿದ್ಯಾರ್ಥಿಗಳು ಯಾರೂ ಕೂಡ ದೃತಿಗೆಡಬಾರದು. ಏನೆಲ್ಲ ನ್ಯೂನ್ಯತೆ ಇದೆ ಅವೆಲ್ಲವನ್ನು ಸರಿಪಡಿಸಿ ಉತ್ತಮ ವಿದ್ಯಾಭ್ಯಾಸ ಮಾಡಲು ಬೇಕಾದ ಅವಕಾಶವನ್ನು ಕಲ್ಪಿಸುತ್ತೇನೆ ಎಂದು ಡಾ. ಎಸ್ ವಿದ್ಯಾಶಂಕರ್ ತಿಳಿಸಿದರು.
Key words: Emphasize Quality Education-KSOU New Chancellor Dr. S Vidyashankar
#Mysore #KSOU #NewChancellor #DrSVidyashankar