ಮೈಸೂರು, ಜ.೨೭. ೨೦೨೫ : ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೆಪಿಟಿಸಿಎಲ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಇಲ್ಲಿನ ಹೂಟಗಳ್ಳಿ ವಿಭಾಗದ ಸ್ಟೇಷನ್ ಅಸೆಸ್ಟೆಂಟ್ ಗ್ರೇಡ್ ೨ ಉದ್ಯೋಗಿ ಭಾಗ್ಯ.ಕೆ ಮೃತ ಮಹಿಳೆ.
ಘಟನೆ:
ಇಂದು ಬೆಳಗ್ಗೆ ಕೂರ್ಗಳ್ಳಿ ಬಸ್ ನಿಲ್ದಾಣದ ಬಳಿ ಭಾಗ್ಯ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಘಟನೆ. ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ಅವಘಡ. ಪ್ರಥಮ ವರ್ತಮಾನ ಹಾಗೂ ಸ್ಥಳೀಯ ಪ್ರತ್ಯಕ್ಷ್ಯ ದರ್ಶಿಗಳ ಪ್ರಕಾರ ಸ್ಕೂಟರ್ ಓಡಿಸುತ್ತಿದ್ದ ಮಹಿಳೆ, ಆಯಾ ತಪ್ಪಿ ನೆಲಕ್ಕುರುಳಿದಾಗ ವಾಟರ್ ಟ್ಯಾಂಕರ್ ತಲೆ ಮೇಲೆ ಹರಿದ ಹಿನ್ನೆಲೆ, ಆಕೆ ಸ್ಥಳದಲ್ಲೇ ಮೃತ.
key words: employee of KPTCL, died, on the spot,water tanker, ran over her.
summary:
A woman employee of KPTCL died on the spot after a water tanker ran over her. The deceased has been identified as Bhagya K, a station assistant grade II employee of Hootagalli division here.