ಬೆಂಗಳೂರು,ಸೆಪ್ಟಂಬರ್,13,2022(www.justkannada.in): ರಾಜಕಾಲುವೆಯನ್ನ ಯಾರೇ ಒತ್ತುವರಿ ಮಾಡಿದ್ದರೂ ಬಿಡಲ್ಲ ತೆರವು ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಒತ್ತುವರಿ ತೆರವು ವಿಚಾರದಲ್ಲಿ ತಾರತಮ್ಯ ಮಾಡಲ್ಲ. ಯಾರೇ ಒತ್ತುವರಿ ಮಾಡಿದ್ರೂ ತೆರವು ಮಾಡುತ್ತೇವೆ. ಮಳೆ ಈಗ ನಮಗೆ ಪಾಠ ಕಲಿಸಿದೆ ಈಗಲೂ ಬಾಗಮನೆ ಪಾರ್ಕ್ ಗೆ ಕಾಲಾವಕಾಶ ನೀಡಿಲ್ಲ. ಯಾವ ಕಂಪನಿಗೂ ಅವಕಾಶ ನೀಡಿಲ್ಲ 30 ಐಟಿ ಕಂಪನಿಯವರೇ ಒತ್ತುವರಿ ಮಾಡಿದ್ದಾರೆ. ಈಗಲೂ ತೆರವು ಮಾಡದೇ ಇದ್ದರೇ ಕಷ್ಟ ಎಂದರು.
ಹಿಂದಿನ ಸರ್ಕಾರಗಳು ಮಳೆ ಬಂದಾಗ ಡೆಮಾಲಿಷನ್ ನಾಟಕವಾಡಿ ಮಳೆ ನಿಂತ ಬಳಿಕ ನಿಲ್ಲಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಒತ್ತುವರಿ ತೆರವಿಗೆ ತಾರತಮ್ಯ ಮಾಡಲ್ಲ. ಯಾವುದೇ ಒತ್ತುವರಿ ಇದ್ದರೂ ತೆರವು ಮಾಡೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ನಿಲ್ಲಲ್ಲ, ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಾಖಲೆ ಇಲ್ಲದಿದ್ದರೆ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
Key words: encroachment- rajakaluve-demolish- Minister- R. Ashok.