ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯ- ಮೈಕ್ ರಯಾನ್

ನವದೆಹಲಿ,ಜನವರಿ,19,2022(www.justkannada.in): ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಮುಖ್ಯಸ್ಥ ಮೈಕ್ ರಯಾನ್ ತಿಳಿಸಿದ್ದಾರೆ.

ವರ್ಲ್ಡ್ ಎಕನಾಮಿಕ್ ಫೋರಂ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಮೈಕ್ ರಯಾನ್, ಕೊರೊನಾ ಸೋಂಕನ್ನು ನಾವು ಎಂದಿಗೂ ಕೊನೆಗೊಳಿಸಲು ಆಗುವುದಿಲ್ಲ. ಶ್ರೀಮಂತ, ಬಡ ದೇಶಗಳ ಮಧ್ಯೆ ಲಸಿಕೆ ಅಸಮಾನತೆ ಕೊನೆಗೊಳಿಸಿದರೆ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾಗಲಿದೆ. ಬಡದೇಶಗಳಲ್ಲಿ ಶೇ. 10 ರಷ್ಟು ಜನರು ಲಸಿಕೆ ಪಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದಲ್ಲಿ ಈ ವರ್ಷ ಕೊರೊನಾ ತುರ್ತು ಪರಿಸ್ಥಿತಿ ಕೊನೆಗೊಳ್ಳಬಹುದು. ಹೀಗಾಗಿ ಅನೇಕ ದೇಶಗಳ್ಲಿ ಲಸಿಕೆ ಅಸಮಾನತೆ ಕೊನೆಗಾಣಿಸಬೇಕು. ಕೊರೊನಾ ಸಾವು, ಆಸ್ಪತ್ರೆಗೆ ಸೇರುವವರ ಒತ್ತಡ ಅಂತ್ಯವಾಗುತ್ತದೆ ಎಂದರು.

Key words: End – Corona -Emergency – terminated- Mike Ryan

ENGLISH SUYMMARY…

The Corona emergency situation might end if the vaccination inequality between the rich and poor nations is wiped off: Mike Ryan
New Delhi, January 19, 2022 (www.justkannada.in): World Health Organisation Emergency Situation Head Mike Ryan has informed that the Corona emergency might end if the inequality of the COVID vaccination between the rich and poor nations is wiped off.
In his address at a meeting held by the World Economic Forum, Mike Ryan expressed his view that we cannot end the Corona infection ever. “The Corona emergency might end if the inequality of the vaccine that presently exists between the rich and poor nations is wiped off. Even 10 percent of the people in poor countries are not vaccinated. The Corona emergency in the world might end by this year. But it is necessary to remove the COVID vaccine inequality in several poor nations. If it happens the pressure of deaths arising due to the pandemic and the number of people being hospitalized will end,” he added.
Keywords: WHO/ Mike Ryan/ World Economic Forum/ vaccine inequality/ end